ಫೈನಲ್‌ನಲ್ಲಿ ನೇಪಾಳ ತಂಡಗಳ ವಿರುದ್ಧ ಭಾರತ ಪುರುಷ, ಮಹಿಳಾ ತಂಡಗಳಿಗೆ ಭರ್ಜರಿ ಗೆಲುವು
ವೇಗ, ಕಾರ್ಯತಂತ್ರ ಮತ್ತು ಕೌಶಲ್ಯದ ಅದ್ಬುತ ಪ್ರದರ್ಶನ ತೋರಿದ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿಪ್ರಶಸ್ತಿ ಗೆಲ್ಲುವುದರೊಂದಿಗೆ ಇತಿಹಾಸ ಸೃಷ್ಟಿಸಿವೆ.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ (Indira Gandhi Indoor Stadium) ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನಾಯಕ ಪ್ರತೀಕ್ ವೈಕರ್ ಮತ್ತು ರಾಮ್ಜಿ ಕಶ್ಯಪ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಮೆನ್ ಇನ್ ಬ್ಲೂತಂಡ, ಪ್ರವಾಸಿ ನೇಪಾಳ ವಿರುದ್ಧ 54-36 ಅಂಕಗಳಿಂದ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಫೈನಲ್‌ನಲ್ಲಿಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡವು 78-40 ಅಂಕಗಳಿಂದ ನೇಪಾಳ ಮಹಿಳಾ ತಂಡವನ್ನು(Nepal Women’s Team) ಸೋಲಿಸಿ ವಿಜಯದ ಕೇಕೆ ಹಾಕಿತು.

ಮೊದಲು ದಾಳಿ ನಡೆಸಿದ ರಾಮ್ಜಿ ಕಶ್ಯಪ್ ಅವರ ಅಸಾಧಾರಣ ಸ್ಕೈ ಡೈವ್ ಮೂಲಕ ನೇಪಾಳದ ಸೂರಜ್ ಪೂಜಾರ(Suraj Pujara) ಅವರನ್ನು ಔಟ್ ಮಾಡಿದರು. ನಂತರ ಸುಯಾಶ್ ಗಾರ್ಗೇಟ್, ಭರತ್ ಸಾಹು ಅವರನ್ನು ಟಚ್ ಮಾಡಿ ಔಟ್ ಮಾಡಿದರು. ಈ ಮೂಲಕ ಕೇವಲ 4 ನಿಮಿಷಗಳಲ್ಲಿ10 ಅಂಕಗಳೊಂದಿಗೆ ಭಾರತಕ್ಕೆ ಉತ್ತಮ ಆರಂಭ ಪಡೆಯಿತು. ಸ್ಕೈ ಡೈವ್‌ಗೆ ಹೆಸರಾದ ಪುರುಷರ ತಂಡವು ಮೊದಲ ಅವಧಿಯ ಅಂತ್ಯಕ್ಕೆ ಭರ್ಜರಿ ಆರಂಭ ಪಡೆಯಿತು. ಇದು ಅವರ ಎದುರಾಳಿಗಳಿಗೆ ಡ್ರೀಮ್ ರನ್ ಅನ್ನು ತಡೆಯಿತು. ಮೊದಲಾರ್ಧದ ಅಂತ್ಯಕ್ಕೆ ಭಾರತ ತಂಡವು 26-0 ಅಂಕಗಳ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ನೇಪಾಳ ಟೀಮ್ ಇಂಡಿಯಾದ ಮಟ್ಟವನ್ನು ಸರಿಗಟ್ಟಲು ಸಾಧ್ಯವಾಗಲಿ.ಲ್ಲಆದರೆ ತಂಡವು ಒಂದೇ ಒಂದು ಡ್ರೀಮ್ ರನ್‌ಗೆ ಹೋಗದಂತೆ ತಡೆಯಿತು. ಆದಿತ್ಯ ಗನ್ಪುಲೆ ಮತ್ತು ನಾಯಕ ಪ್ರತೀಕ್ ವೈಕರ್ ತಂಡವನ್ನುಮುನ್ನಡೆಸಿದರು. ನಿಯಮಿತ ಟಚ್‌ಗಳ ಹೊರತಾಗಿಯೂ, ತಂಡವು ಪಂದ್ಯದ ದ್ವಿತೀಯಾರ್ಧದಲ್ಲಿ26-18 ಮುನ್ನಡೆ ಸಾಧಿಸಿತು.
3ನೇ ಅವಧಿಯಲ್ಲಿ ಭಾರತ ಅಚಲ ಆತ್ಮವಿಶ್ವಾಸವನ್ನು ಪ್ರದರ್ಶಿಸಿತು. ನಾಯಕ ಪ್ರತೀಕ್ ವೈಕರ್ ಅನೇಕ ಸ್ಕೈ ಡೈವ್‌ಗಳೊಂದಿಗೆ ಮ್ಯಾಟ್ ಮೇಲೆ ಮಿಂಚಿದರು ತಂಡದ ಸಾಮೂಹಿಕ ಪ್ರಯತ್ನವು ತಂಡದ ಅಂಕವನ್ನು 54-18 ಕ್ಕೆ ವಿಸ್ತರಿಸಿತು.
ಟೀಮ್ ಇಂಡಿಯಾ ವಿರುದ್ಧ ಪುಟಿದೇಳುವ ಪ್ರಯತ್ನದಲ್ಲಿದ್ದಾಗ ನೇಪಾಳ ತಂಡವು ಟರ್ನ್ 4 ರಲ್ಲಿಕಠಿಣ ಹೋರಾಟ ನಡೆಸಿತು. ಅಂತಿಮವಾಗಿ 54-36 ಅಂಕಗಳ ಅಂತರದಲ್ಲಿ ಭಾರತ ಗೆಲುವು ಸಾಧಿಸಿತು.
ಅಜೇಯದೊಂದಿಗೆ ಫೈನಲ್ ಪ್ರವೇಶಿಸಿದ್ದ ಭಾರತ ತಂಡಗಳು ಅರ್ಹವಾಗಿಯೇ ಪ್ರಶಸ್ತಿಗಳಿಗೆ ಭಾಜನವಾದವು. ಪುರುಷರ ತಂಡ ಗುಂಪು ಹಂತದಲ್ಲಿ ಬ್ರೆಜಿಲ್, ಪೆರು ಮತ್ತು ಭೂತಾನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತವು ಪಂದ್ಯಾವಳಿಯುದ್ದಕ್ಕೂ ತಮ್ಮ ಪ್ರಾಬಲ್ಯ ಪ್ರದರ್ಶಿಸಿತು. ಗುಂಪು ಹಂತದ ಆವೇಗ ನಾಕೌಟ್ ಸುತ್ತುಗಳಲ್ಲಿಮುಂದುವರಿಯಿತು. ಕ್ವಾರ್ಟರ್ ಫೈನಲ್‌ನಲ್ಲಿಬಾಂಗ್ಲಾದೇಶವನ್ನು ಸೋಲಿಸಿದ ಭಾರತ ಸೆಮಿಫೈನಲ್‌ನಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು.

ಗಣ್ಯರ ಸಮಾಗಮ:
ಉದ್ಘಾಟನಾ ಆವೃತ್ತಿಯ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯಗಳಿಗೆ ಹಲವು ಗಣ್ಯರು ಸಾಕ್ಷಿಯಾದರು. ಇದು ಈ ಐತಿಹಾಸಿಕ ಕ್ರೀಡಾಕೂಟಕ್ಕೆ ಇನ್ನಷ್ಟು ಮೆರಗು ನೀಡಿತು. ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥಾಲ್(supreme Court Justice Pankaj Mithal) ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು(Kiran Rijiju) ಸೇರಿ ಹಲವರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು. ಇವರಲ್ಲದೆ, ಒಡಿಶಾದ ಕ್ರೀಡೆ ಹಾಗೂ ಉನ್ನತ ಶಿಕ್ಷ ಣ ಸಚಿವ ಸೂರ್ಯವಂಶಿ ಸೂರಜ್, ಅಂತಾರಾಷ್ಟ್ರೀಯ ಖೋ ಖೋ ಫೆಡರೇಶನ್ ಅಧ್ಯಕ್ಷ ಸುಧಾಂಶು ಮಿತ್ತಲ್ (Sudhanshu Mittal) ಸಹ ಉಪಸ್ಥಿತರಿದ್ದರು.
ಯಶಸ್ವಿ ಆಯೋಜನೆ: ನಿರೀಕ್ಷೆಯಂತೆ ಬಲಿಷ್ಠ ಭಾರತ ತಂಡಗಳು ಪ್ರಶಸ್ತಿ ಗೆಲ್ಲುವುದರೊಂದಿಗೆ ಜನವರಿ 13ರಂದು ಆರಂಭವಾದ ಖೋ ಖೋ ವಿಶ್ವಕಪ್‌ಗೆ ತೆರೆ ಬಿದ್ದಿತು. ಸಾಂಪ್ರದಾಯಿಕ ಭಾರತೀಯ ಕ್ರೀಡೆಯಿಂದ ಒಲಿಂಪಿಕ್ ಕ್ರೀಡೆಯಾಗುವ ಹಾದಿಯಲ್ಲಿಹಾಲಿ ವಿಶ್ವಕಪ್ ಜಗತ್ತಿನ ಗಮನ ಸೆಳೆಯಿತು. 23 ರಾಷ್ಟ್ರಗಳ 39 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಟೂರ್ನಿಯ ಮಹತ್ವವನ್ನು ಸಾರಿತು.