Kho Kho World Cup 2025 | Indian men’s, women’s teams enter semi-finals
ನವದೆಹಲಿ, ಜನವರಿ 17, 2025: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ 2025ರ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳೆಯರು ಮತ್ತು ಪುರುಷರ ತಂಡಗಳು ಕ್ರಮವಾಗಿ ತಮ್ಮ ವಿಭಾಗದಲ್ಲಿ ಸೆಮಿಫೈನಲ್ಸ್ ಪ್ರವೇಶ ಮಾಡಿವೆ.
ಮಹಿಳಾ ತಂಡವು ಬಾಂಗ್ಲಾದೇಶ ವಿರುದ್ಧ 109-16 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರೆ, ಪುರುಷರ ತಂಡವು ಶ್ರೀಲಂಕಾ ವಿರುದ್ಧ 100-40 ಅಂಕಗಳಿಂದ ಗೆದ್ದು ಸೆಮಿಫೈನಲ್ಸ್ಗೆ ಲಗ್ಗೆ ಹಾಕಿತು.

ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ಮಹಿಳಾ ತಂಡವು ಎರಡನೇ ಅವಧಿಯಲ್ಲಿಐದು ನಿಮಿಷಗಳ ಕಾಲ ನಡೆದ ಆಕರ್ಷಕ ಡ್ರೀಮ್ ರನ್ ಸೇರಿದಂತೆ ಎಲ್ಲಾ ನಾಲ್ಕು ಅವಧಿಗಳಲ್ಲಿತಮ್ಮ ಪ್ರಾಬಲ್ಯ ಪ್ರದರ್ಶಿಸಿತು. ಇದರೊಂದಿಗೆ ಆತಿಥೇಯ ತಂಡವು 100ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಗಮನಾರ್ಹ ಪ್ರದರ್ಶನ ಮುಂದುವರಿಸಿತು. ಇದು ಪಂದ್ಯಾವಳಿಯಲ್ಲಿಅಂಕಗಳ ಶತಕದ ಗಡಿ ದಾಟಿದ ಸತತ ಐದನೇ ಪಂದ್ಯವಾಗಿದೆ.
ನಾಯಕಿ ಪ್ರಿಯಾಂಕಾ ಇಂಗಳೆ, ಅಶ್ವಿನಿ ಶಿಂಧೆ ಮತ್ತು ರೇಷ್ಮಾ ರಾಥೋಡ್ ಮಿಂಚಿದರು. 5 ನಿಮಿಷ 36 ಸೆಕೆಂಡುಗಳ ಕಾಲ ಮೈದಾನದಲ್ಲಿದ್ದ ಈ ಬ್ಯಾಚ್ 6 ಅಂಕಗಳನ್ನು ಗಳಿಸಿ ಗಣನೀಯ ಮುನ್ನಡೆಗೆ ಕಾರಣವಾಯಿತು. 2ನೇ ಅವಧಿಯ ಅಂತ್ಯಕ್ಕೆ ಬಾಂಗ್ಲಾದೇಶ ಕೇವಲ ನಾಲ್ಕು ಟಚ್ ಪಾಯಿಂಟ್ಸ್ ಗಳಿಸಲು ಶಕ್ತವಾಯಿತು. ಹೀಗಾಗಿ ಭಾರತದ ಮುನ್ನಡೆ 56-8 ಅಂಕಗಳಿಗೆ ವಿಸ್ತರಣೆಗೊಂಡಿತು.

3ನೇ ಅವಧಿಯಲ್ಲಿಬಾಂಗ್ಲಾದೇಶಕ್ಕೆ ಆಟಕ್ಕೆ ಹೊಂದಿಕೊಳ್ಳಲು ಅವಕಾಶ ನೀಡದ ಕಾರಣ ಭಾರತೀಯರು ಮತ್ತೊಮ್ಮೆ ಮೇಲುಗೈ ಸಾಧಿಸಿದರು. ನಾಲ್ಕನೇ ಅವಧಿಯಲ್ಲಿ ಪಂದ್ಯವು ಮತ್ತೊಮ್ಮೆ ಏಕಪಕ್ಷೀಯವಾಗಿತ್ತು. ಇದರೊಂದಿಗೆ ಆತಿಥೇಯ ತಂಡವು 109-16 ಅಂಕಗಳಿಂದ ಮುನ್ನಡೆ ಸಾಧಿಸಿತು.ಈ ಜಯದೊಂದಿಗೆ ಜನವರಿ 18ರ ಶನಿವಾರ ನಡೆಯಲಿರುವ ಮತ್ತೊಂದು ರೋಚಕ ಸೆಮಿಫೈನಲ್ ಪಂದ್ಯಕ್ಕೆ ಭಾರತ ಸಜ್ಜುಗೊಂಡಿತು.
ಪುರುಷರ ತಂಡದ ಅದ್ಭುತ ಪ್ರದರ್ಶನ
ಪಂದ್ಯದ ನಾಲ್ಕು ಅವಧಿಗಳಲ್ಲೂಅಧಿಕಾರಯುತ ಪ್ರದರ್ಶನ ನೀಡಿದ ಭಾರತ ಪುರುಷ ತಂಡ ಇಲ್ಲಿನಡೆಯುತ್ತಿರುವ ಖೋ ಖೋ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 100-40 ಅಂಕಗಳಿಂದ ಗೆದ್ದು ಸೆಮಿಫೈನಲ್ಸ್ಗೆ ಲಗ್ಗೆ ಹಾಕಿದೆ.

ಪಂದ್ಯದಲ್ಲಿರಾಮ್ಜಿ ಕಶ್ಯಪ್, ಪ್ರತೀಕ್ ವೈಕರ್ ಮತ್ತು ಆದಿತ್ಯ ಗನ್ಪುಲೆ ಅವರಂತಹ ಅದ್ಭುತ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಅವಧಿಯಲ್ಲಿ58 ಅಂಕಗಳನ್ನು ಗಳಿಸಿತು. ಶ್ರಿಲಂಕಾ ತಂಡವನ್ನು ಒಂದೇ ಒಂದು ಪಾಯಿಂಟ್ ಗಳಿಸದಂತೆ ತಡೆದರು. ಎರಡನೇ ಅವಧಿಯಲ್ಲಿ ಭಾರತೀಯ ತಂಡದ ಸದಸ್ಯರು ಸ್ಥಿರವಾಗದಂತೆ ಲಂಕಾ ಆಟಗಾರರು ನೋಡಿಕೊಂಡರು. ಆದರೆ ಇದು ಸಾಕಾಗಲಿಲ್ಲ, ಏಕೆಂದರೆ ಭಾರತೀಯರು ಆಗಲೇ ಗಣನೀಯ ಮುನ್ನಡೆ ಹೊಂದಿದ್ದರು.

ತಿರುಗೇಟು ನೀಡುವ ಜವಾಬ್ದಾರಿ ಶ್ರೀಲಂಕಾದ ಮೇಲಿತ್ತು. ಆದರೆ ದಿಟ್ಟ ಹೋರಾಟ ನೀಡಲು ಅವರಿಗೆ ಅವಕಾಶ ದೊರೆಯಲಿಲ್ಲ, ಏಕೆಂದರೆ ಮೂರನೇ ಅವಧಿಯ ಕೊನೆಯಲ್ಲಿಭಾರತೀಯರು 100 ಅಂಕಗಳನ್ನು ತಲುಪಿದರು. ಇದು ಖೋ ಖೋ ವಿಶ್ವಕಪ್ನ ಸೆಮಿಫೈನಲ್ನಲ್ಲಿಭಾರತದ ಸ್ಥಾನವನ್ನು ಬಹುತೇಕ ಖಚಿತಪಡಿಸಿತು. ಪಬಾನಿ ಸಬರ್ ಪಂದ್ಯದ ಅಂತಿಮ ಅವಧಿಯ ಮೊದಲ ಬ್ಯಾಚ್ನಲ್ಲಿಅನಿಕೇತ್ ಪೋಟೆ ಮತ್ತು ಶಿವಾ ರೆಡ್ಡಿ ಅವರೊಂದಿಗೆ ಸೇರಿಕೊಂಡರು. ಪಂದ್ಯವು 100-40 ಅಂಕಗಳೊಂದಿಗೆ ಕೊನೆಗೊಂಡಾಗ, ಭಾರತೀಯರು ಸುಲಭವಾಗಿ ಸೆಮಿಫೈನಲ್ಗೆ ಮುನ್ನಡೆದರು.