ಭಾರತ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ. ಈ ಟೂರ್ನಿಯಲ್ಲಿ ಭಾರತೀಯ ತಂಡದ ಬ್ಯಾಟ್ಸಮನ್ ಗಳು ಹಾಗೂ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದರು. ಹೀಗಾಗಿ ಭಾರತ ತಂಡ ಗೆಲುವು ಸಾಧಿಸಿದೆ. ಈ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಬೌಲರ್ ಗಳ ಶ್ರೇಯಾಂಕ ಬಿಡುಗಡೆಯಾಗಿದ್ದು, ಭಾರತೀಯ ಆಟಗಾರರು ಕಮಾಲ್ ಮಾಡಿದ್ದಾರೆ.
ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಉರುಳಿಸಿದ್ದ ವರುಣ್, ವರುಣ್ ಚಕ್ರವರ್ತಿ ಇದೀಗ ಐಸಿಸಿ ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಮತ್ತೊಮ್ಮೆ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಕಳೆದ ವಾರದ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 100 ಬೌಲರ್ಗಳನ್ನು ಹಿಂದಿಕ್ಕಿದ್ದ ವರುಣ್ ಅಗ್ರ ನೂರರೊಳಕ್ಕೆ ಎಂಟ್ರಿಕೊಟ್ಟಿದ್ದರು. ಹಿಂದಿನ ವಾರ 96ನೇ ಸ್ಥಾನಕ್ಕೇರಿದ್ದ ವುರಣ್, ಈಗ 16 ಬೌಲರ್ಗಳನ್ನು ಹಿಂದಿಕ್ಕಿ ನೂತನ ಏಕದಿನ ಬೌಲರ್ಗಳ ಶ್ರೇಯಾಂಕದಲ್ಲಿ 80 ನೇ ಸ್ಥಾನ ತಲುಪಿದ್ದಾರೆ.
ಕುಲ್ದೀಪ್ ಯಾದವ್ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಹೊಸ ಏಕದಿನ ಶ್ರೇಯಾಂಕದಲ್ಲಿ ಕುಲ್ದೀಪ್ ಯಾದವ್ 3 ಸ್ಥಾನ ಜಿಗಿದಿದ್ದಾರೆ. ರು 6 ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 5 ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ ಕೂಡ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ, ಶ್ರೇಯಾಂಕದಲ್ಲಿ 3 ಸ್ಥಾನ ಮೇಲೇರಿ 10 ನೇ ಸ್ಥಾನಕ್ಕೆ ಬಂದಿದ್ದಾರೆ.