ಭಾರತೀಯ ಮಹಿಳಾ ತಂಡ ತ್ರಿಕೋನ ಸರಣಿ ಗೆದ್ದು ಬೀಗಿದೆ.
ಶ್ರೀಲಂಕಾ, ಭಾರತ, ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ಮಧ್ಯೆ ನಡೆದ ತ್ರಿಕೋನ ಸರಣಿ(Tri-Series) ಯನ್ನು ಭಾರತೀಯ ಮಹಿಳಾ ತಂಡ ಗೆದ್ದು ಬೀಗಿದೆ. ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ (IND vs SL) ಮಹಿಳಾ ತಂಡಗಳ ನಡುವೆ ನಡೆದಿತ್ತು. ಫೈನಲ್ ನಲ್ಲಿ ಭಾರತ ತಂಡ 97 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ (Smriti Mandhana) 116, ಪ್ರತೀಕಾ 30 ರನ್ ಗಳಿಸಿದರು. ಏಕದಿನ ಕ್ರಿಕೆಟ್ನಲ್ಲಿ ಮಂಧಾನ ಅವರ 11 ನೇ ಶತಕವಾಗಿದೆ. ಈ ಮೂಲಕ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಬರೆದಿದ್ದಾರೆ. ಹರ್ಲೀನ್ 47 ರನ್, ಹರ್ಮನ್ ಪ್ರೀತ್ 41, ಜೆಮಿಮಾ 44 ರನ್ ಗಳಿಸಿದರು. ಪರಿಣಾಮ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 342 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 48.2 ಓವರ್ ಗಳಲ್ಲಿ 245 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಭಾರತದ ಪರ ಸ್ನೇಹಾ ರಾಣಾ 9.2 ಓವರ್ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.