ಭಾರತ ಹಾಗೂ ಬಾಂಗ್ಲಾದೇಶ ಮದ್ಯೆ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಗಿದಿವೆ. ಎರಡೂ ಪಂದ್ಯಗಳನ್ನು ಭಾರತ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಈ ಮಧ್ಯೆ ಮೂರನೇ ಪಂದ್ಯವನ್ನು ಭಾರತ ಗೆದ್ದರೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದೆ.
ಅಕ್ಟೋಬರ್ 12 ರಂದು ಬಾಂಗ್ಲಾ ವಿರುದ್ಧ ಮೂರನೇ ಪಂದ್ಯ ನಡೆಯಲಿದೆ. ಈಗಾಗಲೇ ತಂಡವು ಸರಣಿ ಗೆದ್ದಿದ್ದರಿಂದಾಗಿ ಈ ಪಂದ್ಯ ಔಪಚಾರಿಕವಾಗಿರುತ್ತದೆ. ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಪಾಕಿಸ್ತಾನದ ಅಪರೂಪದ ದಾಖಲೆಯೊಂದನ್ನು ಮುರಿಯಲ್ಲಿದೆ. ಕ್ಯಾಲೆಂಡರ್ ವರ್ಷದಲ್ಲಿ ಅಧಿಕ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆಯಲಿದೆ.
ಒಂದು ವರ್ಷದಲ್ಲಿ ಅಧಿಕ ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಪ್ರಸ್ತುತ ಉಗಾಂಡಾ ತಂಡವು ಮೊದಲ ಸ್ಥಾನದಲ್ಲಿದೆ. ಟಿ20 ಕ್ರಿಕೆಟ್ನಲ್ಲಿ ಇತರ ದೊಡ್ಡ ತಂಡಗಳು ಮಾಡಲಾಗದ್ದನ್ನು ಉಗಾಂಡಾ ಮಾಡಿದೆ. 2023ರಲ್ಲಿ ಉಗಾಂಡ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಅಂದರೆ 29 ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ಭಾರತ ತಂಡವು ಒಟ್ಟು 28 ಟಿ20 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಎರಡು ತಂಡಗಳ ನಂತರ, ತಾಂಜಾನಿಯಾ ತಂಡವು 2022 ರಲ್ಲಿ 21 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನದಲ್ಲಿದೆ. ಈಗ ಮತ್ತೆ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಬಂದಿದೆ.
ಈ ವರ್ಷ ಅಂದರೆ 2024ರಲ್ಲಿ ಇಲ್ಲಿಯವರೆಗೆ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಇದಕ್ಕೂ ಮುನ್ನ ಪಾಕಿಸ್ತಾನ 2020ರಲ್ಲಿ 20 ಪಂದ್ಯಗಳನ್ನು ಗೆದ್ದಿತ್ತು. ಈ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸಮಬಲ ಸಾಧಿಸಿವೆ. ಹೀಗಾಗಿ ಭಾರತ ಬಾಂಗ್ಲಾ ವಿರುದ್ಧ ಗೆದ್ದರೆ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದೆ. ಸದ್ಯದ ಭಾರತದ ಪರಾಕ್ರಮ ನೋಡಿದರೆ, ಮೂರನೇ ಪಂದ್ಯ ಗೆಲ್ಲುವುದು ನಿಶ್ಚಿತ ಎನ್ನಲಾಗುತ್ತಿದೆ.