ಅಹಮದಾಬಾದ್: ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮನಮೋಹಕ ಶತಕ (112) ಮತ್ತು ಬೌಲರ್ಗಳ ಮಾರಕ ಬೌಲಿಂಗ್ ಬಲದಿಂದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು 3-0 ಅಂತರದಿಂದ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಭಾರತ ತಂಡ ನೀಡಿದ್ದ 356 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಲು ವಿಫಲವಾದ ಇಂಗ್ಲೆಂಡ್ 142 ರನ್ಗಳಿಂದ ಸೋಲೊಪ್ಪಿಕೊಂಡು ಮುಖಭಂಗಕ್ಕೆ ಒಳಗಾಯಿತು.
ಇಂಗ್ಲೆಂಡ್ ವಿರುದ್ಧ ಭಾರತಕ್ಕಿದು ಎರಡನೇ ಅತಿ ದೊಡ್ಡ ಏಕದಿನ ಪಂದ್ಯದ ಗೆಲುವು . ಆಂಗ್ಲರ ನೆಲದಲ್ಲಿ ಟಿ20 ಸರಣಿಯ ಜೊತೆಗೆ ಏಕದಿನ ಸಿರೀಸನ್ನೂ ಕಳೆದುಕೊಂಡು ನಿರಾಸೆಯೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಹೋಗುತ್ತಿದ್ದಾರೆ. ಆದರೆ ಆಟಗಾರರ ಸಂಘಟಿತ ಹೋರಾಟ ಮತ್ತು ಈ ಗೆಲುವು ಮೆನ್ ಇನ್ ಬ್ಲ್ಯೂ ಆತ್ಮ ವಿಶ್ವಾಸ ಮತ್ತಷ್ಟು ಇಮ್ಮಡಿಗೊಳಿಸಿದೆ.
ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅತಿ ದೊಡ್ಡ ಗೆಲುವು
158 ರನ್ – ರಾಜ್‌ಕೋಟ್ 2008
142 ರನ್ – ಅಹಮದಾಬಾದ್ 2025 *
133 ರನ್ – ಕಾರ್ಡಿಫ್ 2014
127 ರನ್ – ಕೊಚ್ಚಿ 2013
126 ರನ್ – ಹೈದರಾಬಾದ್ 2011