ದುಬೈ : ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ತನ್ನದಾಗಿಸಿಕೊಂಡಿದೆ. ಭಾರತ ತಂಡಕ್ಕಿದು ದಾಖಲೆ 3ನೇ ಚಾಂಪಿಯನ್ಸ್ ಟ್ರೋಫಿಯಾಗಿದೆ. ಈ ಮೂಲಕ ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.
ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ 25 ವರ್ಷಗಳ ನಂತರ ಭಾರತ ತಂಡ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಪ್ರಶಸ್ತಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ. ಈ ಟ್ರೋಫಿ ಗೆದ್ದಿರುವ ಭಾರತ ತಂಡ 20 ಕೋಟಿ ರೂಪಾಯಿ ಬಹುಮಾನ ಗೆದ್ದಿದೆ. ಹಾಗಾದರೆ ಉಳಿದ ತಂಡಗಳು ಗೆದ್ದಿರುವ ಮೊತ್ತವೆಷ್ಟು ಎಂಬೆಲ್ಲ ವಿವರ ಇಲ್ಲಿದೆ.
ಬಹುಮಾನದ ವಿವರ ಇಲ್ಲಿದೆ
ಒಟ್ಟು ಬಹುಮಾನ ಮೊತ್ತ 6.9 ಮಿಲಿಯನ್ ಡಾಲರ್ (ಸುಮಾರು 60 ಕೋಟಿ ರೂ)
ವಿಜೇತ ಭಾರತ ತಂಡಕ್ಕೆ ತಂಡಕ್ಕೆ ಸುಮಾರು 19.45 ಕೋಟಿ ರೂ (ಸುಮಾರು 2.24 ಯುಎಸ್ ಮಿಲಿಯನ್ ಡಾಲರ್) ಬಹುಮಾನ ಸಿಕ್ಕಿದೆ.
ಇದು 2017ರ ಆವೃತ್ತಿಗಿಂತ ಶೇ 53 ಹೆಚ್ಚು.
ರನ್ನರ್ಅಪ್ ನ್ಯೂಜಿಲೆಂಡ್ ತಂಡಕ್ಕೆ 1.12 ಮಿಲಿಯನ್ ಡಾಲರ್ (ಸುಮಾರು 9.72 ಕೋಟಿ ರೂ) ಸಿಕ್ಕಿದೆ.
ಸೆಮಿಫೈನಲ್ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ತಲಾ 5,60,000 ಡಾಲರ್ (4.86 ಕೋಟಿ ರೂ) ದೊರಕಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಿಸಲು ಎಲ್ಲಾ 8 ತಂಡಗಳಿಗೆ ತಲಾ 1,25,000 ಡಾಲರ್ (ಸುಮಾರು 1.08 ಕೋಟಿ ರೂ) ಸಿಗಲಿದೆ
ಟೂರ್ನಿಯಲ್ಲಿ ಪ್ರತಿ ಪಂದ್ಯದಲ್ಲಿ ಗೆಲ್ಲುವ 34,000 ಡಾಲರ್ (ಸುಮಾರು 29 ಲಕ್ಷ ರೂ) ದೊರೆಯಲಿದೆ.
ಐದು ಅಥವಾ 6ನೇ ಸ್ಥಾನ ಪಡೆದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳು ತಲಾ 350,000 ಡಾಲರ್ (3.04 ಕೋಟಿ) ಗಳಿಸಿವೆ.
7ನೇ ಮತ್ತು 8ನೇ ಸ್ಥಾನ ಪಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ 140,000 ಡಾಲರ್ (1.21 ಕೋಟಿ) ಪಡೆಯಲಿವೆ.
ಒಂದು ತಂಡವು ಚಾಂಪಿಯನ್ಸ್ ಟ್ರೋಫಿ ಗೆದ್ದರೆ, ಅದು ವಿಜೇತರ ಬಹುಮಾನದ ಹಣ, ಟೂರ್ನಿಯಲ್ಲಿ ಪಾಲ್ಗೊಂಡದ್ದರ ಹಣ ಮತ್ತು ಲೀಗ್ನಲ್ಲಿ ಎಲ್ಲಾ 3 ಪಂದ್ಯಗಳ ಗೆದ್ದ ಹಣ ಸೇರಿದಂತೆ 22 ಕೋಟಿ ರೂಪಾಯಿ ಗಳಿಸಬಹುದು.
ಪಂತ್, ಅಯ್ಯರ್ ಐಪಿಎಲ್ ಮೊತ್ತಕ್ಕಿಂತ ಕಡಿಮೆ
ಚಾಂಪಿಯನ್ಸ್ ಟ್ರೋಫಿ ಬಹುಮಾನ ವಿಜೇತರಿಗೆ ಸಿಗುವ ಮೊತ್ತವು ಐಪಿಎಲ್ನಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಅವರ ಐಪಿಎಲ್ ವೇತನಕ್ಕಿಂತ ಕಡಿಮೆ ಕಳೆದ ವರ್ಷ ಕೆಕೆಆರ್ ತಂಡವನ್ನು ಮೂರನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುನ್ನಡೆಸಿದ್ದ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ ಹರಾಜಿನಲ್ಲಿ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂಪಾಯಿಗೆ ಖರೀದಿಸಿದೆ. ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ 23.75 ಕೋಟಿ ರೂಪಾಯಿಗೆ ಖರೀದಿಸಿದೆ.
ಫೈನಲ್ ಫಲಿತಾಂಶ
ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತನ್ನ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ ಜಯದ ನಗೆ ಬೀರಿತು.