ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ತಂಡವು ಈ ಬಾರಿ ಐತಿಹಾಸಿಕ 29 ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ.
ಈ ಬಾರಿ ಭಾರತೀಯ ಆಟಗಾರರು ಸರ್ವ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಭಾರತೀಯ ಆಟಗಾರರು 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟು 29 ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎಂಬ ದಾಖಲೆಗೆ ಸಾಕ್ಷಿಯಾಗಿದೆ.
ಭಾರತದ ಪ್ಯಾರಾ ಅಥ್ಲೀಟ್ ಗಳು 29 ಪದಕಗಳನ್ನು ಜಯಿಸುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಭಾರತವು ಪದಕಗಳ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ನಮ್ಮ ಶತೃ ರಾಷ್ಟ್ರ ಪಾಕ್ ಕೇವಲ ಒಂದು ಕಂಚಿನ ಪದಕ ಗೆಲ್ಲುವುದರ ಮೂಲಕ 79ನೇ ಸ್ಥಾನ ಗಳಿಸಿದೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಚೀನಾ, ಗ್ರೇಟ್ ಬ್ರಿಟನ್, ಯುಎಸ್ ಎ, ಇಟಲಿ ದೇಶಗಳು ಅತೀ ಹೆಚ್ಚಿನ ಪದಕ ಗೆದ್ದಿವೆ. ಭಾರತದ ಪದಕಕ್ಕೂ ಈ ರಾಷ್ಟ್ರಗಳ ಪದಕಕ್ಕೂ ದೊಡ್ಡ ವ್ಯತ್ಯಾಸವಿದೆ. ಚೀನಾ 94 ಚಿನ್ನ ಸಹಿತ ಬರೋಬ್ಬರಿ 217 ಪದಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿದೆ. ಗ್ರೇಟ್ ಬ್ರಿಟನ್ 47 ಚಿನ್ನದ ಪದಕ ಸಹಿತ 120 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಯುಎಸ್ ಎ 36 ಚಿನ್ನದ ಪದಕ ಸಹಿತ 103 ಪದಕಗಳನ್ನು ಗೆದ್ದಿದೆ. ಈ ಮೂರು ದೇಶಗಳನ್ನು ಹೊರತು ಪಡಿಸಿದರೆ, ಇನ್ನುಳಿದ ರಾಷ್ಟ್ರಗಳು ಮೂರಂಕಿಯ ಪದಕ ಗೆಲ್ಲಲು ವಿಫಲವಾಗಿವೆ. ಭಾರತ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪದಕ ಗೆದ್ದು, ತನ್ನ ಸಾಧನೆಯನ್ನು ಅಭಿವೃದ್ಧಿ ಪಡಿಸಿಕೊಂಡಿದೆ.