ಆಸ್ಟ್ರೇಲಿಯಾ : ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ನಾಳೆಯಿಂದ (ಅ.29) ಶುರುವಾಗಲಿದೆ. ಐದು ಮ್ಯಾಚ್ಗಳ ಈ ಸರಣಿಯ ಮೊದಲ ಪಂದ್ಯವು ಕ್ಯಾನ್ಬೆರಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮಿನೊಂದಿಗೆ ಸಜ್ಜಾಗುತ್ತಿದೆ. ಇಂಡೊ-ಆಸೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಭಾರತೀಯ ಕಾಲಮಾನ ಮಧ್ಯಾಹ್ನ 1.45ಕ್ಕೆ ಶುರುವಾಗಲಿದೆ. ಇದಕ್ಕೂ ಮುನ್ನ 1.15ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ಸ್ಟಾರ್ ಆ್ಯಪ್ ಹಾಗೂ ವೆಬ್ಸೈಟ್ನಲ್ಲೂ ಈ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ ವೇಳಾಪಟ್ಟಿ :
- ಅಕ್ಟೋಬರ್ 29: ಮೊದಲ ಟಿ20 ಪಂದ್ಯ – ಮನುಕಾ ಓವಲ್, ಕ್ಯಾನ್‌ಬೆರಾ
- ಅಕ್ಟೋಬರ್ 31: ಎರಡನೇ ಟಿ20 ಪಂದ್ಯ– ಮೆಲ್ಬೋರ್ನ್ ಕ್ರಿಕೆಟ್ ಮೈದಾನ
- ನವೆಂಬರ್ 2,: ಮೂರನೇ ಟಿ20 ಪಂದ್ಯ– ಬೆಲ್ಲೆರಿವ್ ಓವಲ್, ಹೋಬಾರ್ಟ್
- ನವೆಂಬರ್ 6: ನಾಲ್ಕನೇ ಟಿ20 ಪಂದ್ಯ – ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
- ನವೆಂಬರ್ 8: ಐದನೇ ಟಿ20 ಪಂದ್ಯ– ದಿ ಗಬ್ಬಾ, ಬ್ರಿಸ್ಬೇನ್
ಇದನ್ನೂ ಓದಿ : ‘ಲ್ಯಾಂಡ್ ಲಾರ್ಡ್’ ಟೀಸರ್ ಹಬ್ಬ.. ಕನ್ನಡ ರಾಜ್ಯೋತ್ಸವಕ್ಕೆ ಸಲಗ ವಿಜಯ್ ಆರ್ಭಟ!



















