ದುಬೈ: ವಿರಾಟ್ ಕೊಹ್ಲಿಯನ್ನು ದಾಖಲೆಗಳ ಸರದಾರ ಎಂದರೆ ತಪ್ಪಾಗಲಾರದರು. ಅವರು ಬ್ಯಾಟಿಂಗ್ ಮೂಲಕ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಅವರು ಫೀಲ್ಡಿಂಗ್‌ನಲ್ಲಿಯೂ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ (ವಿಕೆಟ್ ಕೀಪರ್ ಅಲ್ಲದ) ಸಾಧನೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಈ ವೇಳೆ ಅವರು ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. (IND vs AUS).
🚨 Milestone Alert 🚨
— BCCI (@BCCI) March 4, 2025
Virat Kohli has now taken the most catches for #TeamIndia in international cricket as a fielder 🫡🫡
Updates ▶️ https://t.co/HYAJl7biEo#INDvAUS | #ChampionsTrophy | @imVkohli pic.twitter.com/tGPzCKfx59
ಮಂಗಳವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ವಿಶೇಷ ದಾಖಲೆ ಮಾಡಿದ್ದಾರೆ. ಆಸ್ಟ್ರೇಲಿಯಾ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಜಾಶ್ ಇಂಗ್ಲಿಸ್ ಕ್ಯಾಚ್ ಪಡೆಯುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.
ಇತಿಹಾಸ ಬರೆದ ವಿರಾಟ್ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಪಟ್ಟಿಯಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಮುರಿದ ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆ ಬರೆದಿದ್ದಾರೆ.
ಎಲ್ಲಾ ಸ್ವರೂಪದಲ್ಲಿಯೂ ವಿರಾಟ್ ಕೊಹ್ಲಿ 335 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 334 ಕ್ಯಾಚ್‌ಗಳನ್ನು ಪಡೆದಿರುವ ರಾಹುಲ್ ದ್ರಾವಿಡ್ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಭಾರತದ ಪರ ದ್ರಾವಿಡ್ 332 ಕ್ಯಾಚ್‌ಗಳನ್ನು ಪಡೆದಿದ್ದರೆ, ಏಷ್ಯಾ XI ಪರ ಆಡುವಾಗ ಇನ್ನುಳಿದ ಎರಡು ಕ್ಯಾಚ್ ಪಡೆದಿದ್ದಾರೆ. ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ಬಿಟ್ಟರೆ ಭಾರತದ ಪರ ಯಾವುದೇ ಆಟಗಾರ 300ಕ್ಕೂ ಅಧಿಕ ಕ್ಯಾಚ್‌ಗಳನ್ನು ಪಡೆದಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಕ್ರಿಕೆಟಿಗರು (ವಿಕೆಟ್ ಕೀಪರ್ ಅಲ್ಲದವರು)
- ವಿರಾಟ್ ಕೊಹ್ಲಿ: 336 ಕ್ಯಾಚ್‌ಗಳು
- ರಾಹುಲ್ ದ್ರಾವಿಡ್: 334 ಕ್ಯಾಚ್‌ಗಳು
- ಮೊಹ್ಮಮದ್ ಅಜರುದ್ದೀನ್: 261 ಕ್ಯಾಚ್‌ಗಳು
- ಸಚಿನ್ ತೆಂಡೂಲ್ಕರ್: 256 ಕ್ಯಾಚ್‌ಗಳು
- ರೋಹಿತ್ ಶರ್ಮಾ: 223 ಕ್ಯಾಚ್‌ಗಳು
- ಅಗ್ರ ಸ್ಥಾನದಲ್ಲಿ ಮಹೇಲಾ ಜಯವರ್ಧನೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಕ್ರಿಕೆಟಿಗರ ಪಟ್ಟಿಯಲ್ಲಿ ಶ್ರೀಲಂಕಾ ದಿಗ್ಗಜ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. ಅವರು 440 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ (354) ಹಾಗೂ ರಾಸ್ ಟೇಲರ್ (351) ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: Maha Kumbh 2025: ಕುಂಭಮೇಳದಿಂದ 3.5 ಲಕ್ಷ ಕೋಟಿ ರೂ. ಆದಾಯ ಹೇಗೆ? ಯೋಗಿ ಕೊಟ್ಟ ಲೆಕ್ಕ ಇಲ್ಲಿದೆ
ನೇಥನ್ ಎಲ್ಲಿಸ್ ಕ್ಯಾಚ್ ಪಡೆದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 161 ಒಡಿಐ ಕ್ಯಾಚ್ ಹಿಡಿದಿದ್ದು, ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಗ್ (160) ಅವರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 121 ಕ್ಯಾಚ್‌ಗಳನ್ನು ಪಡೆದಿರುವ ವಿರಾಟ್ ಕೊಹ್ಲಿ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ (210) ಹಾಗೂ ವಿವಿಎಸ್ ಲಕ್ಷ್ಮಣ್ (135) ಅವರು ಈ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ. ಇನ್ನು ಕೊಹ್ಲಿ ಟಿ20ಐ ಕ್ರಿಕೆಟ್‌ನಲ್ಲಿ 54 ಕ್ಯಾಚ್ ಪಡೆದಿದ್ದಾರೆ.