ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತೀರ ಕಳಪೆ ಸ್ಥಿತಿ ತಲುಪಿದ್ದು, ಜನರು ತುಂಬಾ ಕಷ್ಟ ಪಟ್ಟುಬದುಕುವಂತಾಗಿದೆ.
ಹೀಗಾಗಿ ಸರ್ಕಾರ ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದೆ. ಹೀಗಾಗಿ ನಗರದಲ್ಲಿ ಮೂರನೇ ಹಂತದ ನಿಯಮ ಜಾರಿ ಮಾಡಲಾಗಿದೆ. ಗ್ರಾಪ್ ಮೂರರ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನ, ಬಿಎಸ್-6 ಡೀಸೆಲ್, ಸಿಎನ್‌ಜಿ ವಾಹನಗಳು ಹೊರತುಪಡಿಸಿ ಉಳಿದೆಲ್ಲಾ ಬಸ್ ಹಾಗೂ ಇನ್ನಿತರ ವಾಹನಗಳು ಸೇರಿದಂತೆ ಅಂತಾರಾಜ್ಯ ವಾಹನಗಳಿಗೆ ದೆಹಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬಿಎಸ್-3, ಬಿಎಸ್-4 ಡೀಸೆಲ್ ವಾಹನಗಳು ದಿಲ್ಲಿಪ್ರ ವೇಶಿಸದಂತೆ ನಿರ್ಬಂಧಿಸಲಾಗಿದೆ. ದಿಲ್ಲಿಯಲ್ಲಿ ಕಟ್ಟಡ ನಿರ್ಮಾಣ, ತೆರವು ಕಾರ್ಯಾಚರಣೆಗೂ ನಿಷೇಧ ಹೇರಲಾಗಿದೆ. ಗಣಿ ಚಟುವಟಿಕೆ ನಿಲ್ಲಿಸಲಾಗಿದೆ. ಮಕ್ಕಳಿಗೆ ಆನ್ ಲೈನ್ ತರಗತಿಗೆ ಅವಕಾಶ ನೀಡಲಾಗಿದೆ. ಜನನಿಬಿಡ ದಿಲ್ಲಿಯ ಪ್ರಮುಖ ರಸ್ತೆಗಳಲ್ಲಿ ಧೂಳು ಏಳದಂತೆ ಪ್ರತಿ ದಿನ ನೀರು ಸಿಂಪಡಿಸಲು ಸೂಚಿಸಲಾಗಿದೆ.
ದಿಲ್ಲಿಗೆ ಹೊಂದಿಕೊಂಡಿರುವ ಹರಿಯಾಣದ ಗುರುಗ್ರಾಮ, ಫರಿದಾಬಾದ್, ಉತ್ತರ ಪ್ರದೇಶದ ಘಾಜಿಯಾಬಾದ್, ಗೌತಮಬುದ್ಧ ನಗರಕ್ಕೂ ಈ ನಿಯಮಗಳು ಅನ್ವಯವಾಗಲಿವೆ.
ದಿಲ್ಲಿಯಲ್ಲಿ ಶುಕ್ರವಾರ ವಾಯು ಗುಣಮಟ್ಟ ಮತ್ತಷ್ಟು ಕುಸಿದಿದೆ. ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕವು ‘ತೀವ್ರ ಕಳಪೆ’ ವಿಭಾಗದಲ್ಲಿ (400 ರಿಂದ 500)ದೆ. ಅಂದರೆ ಎಕ್ಯೂಐ 411 ರಷ್ಟು ದಾಖಲಾಗಿದೆ. ವಾಯು ಮಾಲಿನ್ಯದ ತೀವ್ರತೆ ಪಕ್ಕದ ಉತ್ತರ ಪ್ರದೇಶದ ಆಗ್ರಾಗೂ ತಟ್ಟಿದೆ. ಪ್ರೇಮ ಮಹಲ್ ಈಗ ದಟ್ಟವಾದ ಹೊಗೆಯಿಂದಾಗಿ ಕಪ್ಪಾಗಿ ಕಾಣುತ್ತಿದೆ.