ಮಾರುಕಟ್ಟೆಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಳವಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಿಸಿವೆ. ಹೀಗಾಗಿ ಇಂದಿನಿಂದಲೇ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 16.50 ರೂ. ಹೆಚ್ಚಳವಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ನ ನೂತನ ಬೆಲೆ 1,818.50 ರೂ. ಆಗಿದೆ.
ಆದರೆ, 14 ಕೆಜಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ದೆಹಲಿಯಿಂದ ಮುಂಬೈಗೆ 10 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಾಗಿದೆ. ಮುಂಬಯಿನಲ್ಲಿ ಎಲ್ ಪಿಜಿ 19 ಕೆಜಿಯ ಸಿಲಿಂಡರ್ ಬೆಲೆ 1754.50 ರೂ ಆಗಿದ್ದು, ಈಗ 1771 ರೂ.ಗೆ ಏರಿಕೆಯಾಗಿದೆ.
14 ಕೆಜಿ ಸಿಲಿಂಡರ್ ಬೆಲೆ ಬೆಲೆಗಳು ಸ್ಥಿರವಾಗಿವೆ. ಗೃಹೋಪಯೋಗಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ 803, ಕೋಲ್ಕತ್ತಾದಲ್ಲಿ ರೂ 829, ಮುಂಬೈನಲ್ಲಿ ರೂ 802.50 ಮತ್ತು ಚೆನ್ನೈನಲ್ಲಿ ರೂ 818.50 ನಲ್ಲಿ ಇದೆ.