ಬ್ರಿಟಿಷರು ಎಂದರೆ ಈಗಲೂ ಭಾರತೀಯರ ರಕ್ತ ಕುದಿಯುತ್ತದೆ. ತಕ್ಕಡಿ ಹಿಡ್ಕೊಂಡು ಭಾರತಕ್ಕೆ ಬಂದು, ಭಾರತೀಯರ ಮೇಲೆ ನೂರಾರು ವರ್ಷಗಳ ಮೇಲೆ ದಬ್ಬಾಳಿಕೆ, ದುರಾಡಳಿತ ನಡೆಸಿದ ಬ್ರಿಟಿಷರು ಎಂದರೆ ಈಗಲೂ ನಮಗೆ ಸಿಟ್ಟು, ಆಕ್ರೋಶ ಕಟ್ಟೆಯೊಡೆಯುತ್ತೆ. ಆದ್ರೆ ಕಾಲ ಈಗ ಬದಲಾಗಿದೆ. ನಮ್ಮನ್ನಾಳಿದ ಬ್ರಿಟಿಷರ ನಾಡಾದ ಬ್ರಿಟನ್ ನಲ್ಲಿಯೇ ಭಾರತೀಯರು ಪಾರುಪತ್ಯ ಸಾಧಿಸುತ್ತಿದ್ದಾರೆ. ಬ್ರಿಟನ್ನಿನ ರಾಜಕೀಯದಿಂದ ಹಿಡಿದು ಉದ್ಯಮ ಕ್ಷೇತ್ರಗಳಲ್ಲಿ ಭಾರತೀಯರೇ ಕಿಂಗ್ ಅನಿಸಿದ್ದಾರೆ. ಅರೆ, ಇದೆಲ್ಲ ಹೇಗ್ ಸಾಧ್ಯವಾಯ್ತು ಅಂತೀರಾ? ಇದೇ ಇವತ್ತಿನ ವಿಶೇಷ.
ಬ್ರಿಟಿಷರ ನಾಡಿನಲ್ಲಿ ಭಾರತೀಯರದ್ದೇ ಅಬ್ಬರ
ರಾಜಕೀಯದಿಂದ ಉದ್ಯಮದವರೆಗೆ ಪ್ರಾಬಲ್ಯ
ಬ್ರಟನ್ನಿನ ಪ್ರತಿ ಕ್ಷೇತ್ರದಲ್ಲೂ ಇಂಡಿಯನ್ಸೇ ಸ್ಟ್ರಾಂಗ್
ಹೌದು, ಬ್ರಿಟನ್ನಿನಲ್ಲಿ ಭಾರತೀಯರ ಪ್ರಾಬಲ್ಯ ದಿನೇದಿನೆ ಜಾಸ್ತಿಯಾಗುತ್ತಿದೆ. ಭಾರತ ಮೂಲದ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದು ಎಲ್ಲರಿಗೂ ನೆನಪಿದೆ. ಅಷ್ಟೇ ಅಲ್ಲ, ಕಳೆದ ವರ್ಷ ನಡೆದ ಬ್ರಿಟನ್ ಸಂಸತ್ತಿನ ಚುನಾವಣೆಯಲ್ಲಿ ಭಾರತ ಮೂಲದ 26 ಮಂದಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬ್ರಿಟನ್ ರಾಜಕೀಯದಲ್ಲಿ ಭಾರತ ಮೂಲದವರು ಪಾರಮ್ಯ ಸಾಧಿಸಿದ್ದಾರೆ.
ಬ್ರಿಟನ್ ಉದ್ಯಮದಲ್ಲೂ ಇಂಡಿಯನ್ಸ್ ಶೈನ್
ಭಾರತೀಯರ ಕಂಪನಿ ಸಂಖ್ಯೆ 1,197ಕ್ಕೆ ಏರಿಕೆ
ವರ್ಷದಲ್ಲೇ ಶೇ.23ರಷ್ಟು ಬೆಳವಣಿಗೆ ಸಾಧನೆ
ಬ್ರಿಟನ್ ನಲ್ಲಿಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಒಡೆತನದ ಕಂಪನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಇಂಥ ಕಂಪನಿಗಳ ಸಂಖ್ಯೆ ಈಗ 1,197ಕ್ಕೆ ತಲುಪಿದ್ದು, ಶೇ.23ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ ಎಂದು ವರದಿಯೊಂದು ತಿಳಿಸಿದೆ. ಬ್ರಿಟನ್ನಲ್ಲಿಸದ್ಯ 1,197 ಭಾರತೀಯ ಮಾಲೀಕತ್ವದ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಭಾರತದ ಕಂಪನಿಗಳ ಆದಾಯ ಏರಿಕೆ
72 ಬಿಲಿಯನ್ ಪೌಂಡ್ ತಲುಪಿದ ಆದಾಯ
ಅಷ್ಟಕ್ಕೂ ಏನಿದು ಸಿಐಐ ವರದಿ?
ಬ್ರಿಟನ್ ನಲ್ಲಿ ಭಾರತೀಯ ಒಡೆತನದ ಕಂಪನಿಗಳ ಒಟ್ಟು ಆದಾಯವು 68.09 ಬಿಲಿಯನ್ ಪೌಂಡ್ ನಿಂದ 72.14 ಬಿಲಿಯನ್ ಪೌಂಡ್ ಗೆ ತಲುಪಿದೆ ಎಂದು ಜಾಗತಿಕ ಹಣಕಾಸು ಸಲಹಾ ಸಂಸ್ಥೆ ಗ್ರಾಂಟ್ ಥಾರ್ನಂಟನ್, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸಹಯೋಗದಲ್ಲಿನಡೆಸಿದ ವಾರ್ಷಿಕ ‘ಇಂಡಿಯಾ ಮೀಟ್ಸ್ ಬ್ರಿಟನ್ ಟ್ರ್ಯಾಕ್’ನ ವಿಶ್ಲೇಷಣೆ ತಿಳಿಸಿದೆ.
ಬ್ರಿಟನ್ನಿನಲ್ಲಿ ಭಾರತ ಮೂಲದ ಉದ್ಯಮಿಯೇ ಶ್ರೀಮಂತ
ಗೋಪಿಚಂದ್ ಹಿಂದುಜಾ ಅವರೇ ಶ್ರೀಮಂತ ಉದ್ಯಮಿ
ಸತತ ನಾಲ್ಕನೇ ವರ್ಷವೂ ಸಿರಿವಂತ ಎಂಬ ಖ್ಯಾತಿ
ಭಾರತ ಮೂಲದ ಗೋಪಿಚಂದ್ ಹಿಂದುಜಾ ನೇತೃತ್ವದ ಹಿಂದುಜಾ ಗ್ರೂಪ್ ಸತತ ನಾಲ್ಕನೇ ಬಾರಿಗೆ ಟೈಮ್ಸ್ ರಿಚ್ ಲಿಸ್ಟ್ ನಲ್ಲಿಮೊದಲನೇ ಸ್ಥಾನ ಪಡೆದಿದೆ. ಇದರೊಂದಿಗೆ ಬ್ರಿಟನ್ ನಲ್ಲಿಹಿಂದುಜಾ ಫ್ಯಾಮಿಲಿ ಪ್ರಾಬಲ್ಯ ಮುಂದುವರಿದಿದೆ. ಗೋಪಿ ಹಿಂದುಜಾ ಹಾಗೂ ಅವರ ಕುಟುಂಬದ ಮೌಲ್ಯವು ಸುಮಾರು 33.67 ಲಕ್ಷ ರೂ. ಆಗಿದ್ದು, ಟೈಮ್ಸ್ ರಿಚ್ ಲಿಸ್ಟ್ 2025ರಲ್ಲಿ ಮೊದಲ ಸ್ಥಾನ ಪಡೆದಿದೆ.
ಹೀಗೆ ಭಾರತವನ್ನು ಆಳಿದ, ಸತತವಾಗಿ ಕೊಳ್ಳೆ ಹೊಡೆದ ಬ್ರಿಟನ್ನಿನಲ್ಲಿ ಭಾರತೀಯರು ಮುನ್ನೆಲೆಗೆ ಬರುತ್ತಿದ್ದು, ಪ್ರತಿ ಭಾರತೀಯರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಹೀಗೆಯೇ, ಬ್ರಿಟನ್ನಿನಲ್ಲಿ ಭಾರತೀಯರು ಇನ್ನಷ್ಟು ಮಿಂಚಲಿ, ಪ್ರಾಬಲ್ಯ ಸಾಧಿಸಲಿ ಎಂದು ಹಾರೈಸೋಣ.