ಕಲಬುರುಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮುರುಡಿ ಗ್ರಾಮದಲ್ಲಿ ವೈರ್‌ನಿಂದ ಕತ್ತು ಬಿಗಿದು ಯುವಕನ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದ ನಿವಾಸಿ ಅಂಬರೀಶ್ ಗವನಹಳ್ಳಿ (20) ಹತ್ಯೆಯಾದ ಯುವಕ. ಸ್ಸ್ನೇಹಿತನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಅಜಯ್ ಧನ್ನೂರೆ ಎಂಬಾತನಿಂದ ಅಂಬರೀಶ್ ಕೊಲೆ ನಡೆದಿದೆ. ಅಜಯ್ ಪತ್ನಿ ಜೊತೆ ಕಳೆದ ಅನೇಕ ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಬೆಂಗಳೂರಿನ ಪಿಜಿಯೊಂದರಲ್ಲಿ ಅಂಬರೀಶ್ ಫುಡ್ ಸಪ್ಲೇ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.