ವಿಜಯನಗರ : ಅಕ್ರಮ ಗೋ ಸಾಗಟ ಮಾಡುತ್ತಿದ್ದ ವಾಹನದ ಮೇಲೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಮಹರಾಷ್ಟ್ರದಿಂದ ರಾಜ್ಯದ ಚಿಂತಾಮಣಿಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಗೋವುಗಳನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯಪುರದ ಸೈಫನ್ ಮುಖಂದರ್ (೪೦), ಮಹಾರಾಷ್ಟ್ರದ ಉಮೇಶ್ ರಾಜಾರಾಂ (೩೦), ಕಾಳೆಪ್ಪ (೩೦), ಶಿವಾಜಿ ಗವಾಡೆ(೩೦) ಬಂಧಿತ ಆರೋಪಿಗಳಾಗಿದ್ದಾರೆ.
ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ರಲ್ಲಿ ಅಕ್ರಮ ಗೋಸಾಗಣೆ ಮಾಡುತ್ತಿದ್ದ ಲಾರಿಯನ್ನು ಹಿಂದೂ ಕಾರ್ಯಕರ್ತರು ತಡೆದು ಆರ್ ಟಿಒ ಮತ್ತು ಪೊಲೀಸರ ಸಹಕಾರದಿಂದ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಮಹಾರಾಷ್ಟ್ರದ ಸಾಂಗೋಲದಿಂದ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 16 ಗೋವುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ಸೇರಿಸಲಾಗಿದೆ. ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಮಗನಿಗೆ ‘ನೀರ್’ ಎಂದು ಹೆಸರಿಟ್ಟ ನಟಿ ಪರಿಣಿತಿ ಚೋಪ್ರಾ, ರಾಘವ್ ದಂಪತಿ | ಅರ್ಥ ಏನು ಗೊತ್ತಾ?



















