ನಾವಿರುವ ಊರಿನಲ್ಲೋ, ನಗರದಲ್ಲೋ ಸ್ವಂತದ್ದೊಂದು ಸೂರು ಹೊಂದಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಮಹಾ ನಗರಗಳಲ್ಲಿರುವವರಿಗಂತೂ ಕನಿಷ್ಠ ಒಂದು ಅಪಾರ್ಟ್ ಮೆಂಟ್ ಖರೀದಿಸಬೇಕು ಎಂಬ ಹಂಬಲ ಸಹಜವಾಗಿರುತ್ತದೆ. ಆದರೆ, ಬ್ಯಾಂಕುಗಳ ಬಡ್ಡಿದರ ನೋಡಿದರೆ, ಇಎಂಐ ಹೊರೆ ಹೊರಲು ಆಗೋದಿಲ್ಲ ಅಂತ ಹೆಚ್ಚಿನ ಜನ ಸಾಲ ಮಾಡೋದಿಲ್ಲ. ಆದರೆ, ಆರ್ ಬಿ ಐ ಈಗ ರೆಪೊ ದರವನ್ನು ಇಳಿಕೆ ಮಾಡಿರುವ ಕಾರಣ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳೋದಿಕ್ಕೆ ಇದು ರೈಟ್ ಟೈಮ್ ಆಗಿದೆ.
ರೆಪೊ ದರ ಇಳಿಕೆ ಮಾಡಿದ ಆರ್ ಬಿ ಐ
ಸಾಲ ಮಾಡುವವರಿಗೂ ಇದು ಸಿಹಿ ಸುದ್ದಿ
ಬ್ಯಾಂಕುಗಳು ನೀಡಲಿವೆ ಕಡಿಮೆ ಬಡ್ಡಿಗೆ ಸಾಲ
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ದಿನಗಳ ಹಿಂದಷ್ಟೇ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಇದರಿಂದ ಈಗ ರೆಪೊ ದರವು ಶೇ.6ರ ಬದಲು 5.5ಕ್ಕೆ ಇಳಿಕೆಯಾಗಿದೆ. ಆರ್ ಬಿ ಐ ರೆಪೊ ದರವನ್ನು ಇಳಿಸಿದ ಕಾರಣ ಗೃಹ ಸಾಲದ ಮೇಲಿನ ಬಡ್ಡಿದರವನ್ನೂ ಬ್ಯಾಂಕುಗಳು ಇಳಿಕೆ ಮಾಡಿವೆ. ಇದರಿಂದಾಗಿ ಗೃಹಸಾಲ ಮಾಡಿದವರಿಗೆ ಇಎಂಐ ಹೊರೆಯು ಹೆಚ್ಚಾಗಿ ಬಾಧಿಸುವುದಿಲ್ಲ. ಹಾಗಾಗಿ, ಗೃಹ ಸಾಲ ಮಾಡುವವರಿಗೆ ಇದು ಸಕಾಲವಾಗಿದೆ.
50 ಲಕ್ಷ ರೂಪಾಯಿ ಸಾಲ ಇದ್ದರೆ ಎಷ್ಟು ಉಳಿಕೆ?
50 ಬೇಸಿಸ್ ಪಾಯಿಂಟ್ ಇಳಿಕೆಯ ಲೆಕ್ಕಾಚಾರ ಎಷ್ಟು?
ವರ್ಷದ ಲೆಕ್ಕದಲ್ಲಿ ಎಷ್ಟು ಉಳಿತಾಯ ಗೊತ್ತಾ?
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ ಗಳನ್ನು ಕಡಿತ ಮಾಡಿರುವ ಕಾರಣ ಗೃಹ ಸಾಲ ಸೇರ ವೈಯಕ್ತಿಕ ಸಾಲ ಮಾಡಿದವರಿಗೆ ದುಡ್ಡು ಉಳಿಯಲಿದೆ. ನೀವು 50 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳಿಗೆ ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. 50 ಲಕ್ಷ ರೂ. ಸಾಲಕ್ಕೆ ನೀವೀಗ ಮಾಸಿಕ ಕಟ್ಟು ಇಎಂಐ ಮೊತ್ತ ಕಡಿಮೆಯಾಗುತ್ತದೆ. 50 ಬೇಸಿಸ್ ಪಾಯಿಂಟ್ ಇಳಿಕೆ ಲೆಕ್ಕಾಚಾರದಲ್ಲಿ ನಿಮ್ಮ ಹೊರೆ ಕಡಿಮೆಯಾಗಲಿದೆ. 50 ಬೇಸಿಸ್ ಪಾಯಿಂಟ್ ಇಳಿಕೆ ಅಂದ್ರೆ, ತಿಂಗಳಿಗೆ ನೀವು 1569 ರೂ. ಉಳಿಸ್ತೀರಿ. ವರ್ಷಕ್ಕೆ ಇದು 19 ಸಾವಿರ ರೂ. ಉಳಿಕೆ ಆಗುತ್ತದೆ. ಹಾಗಾದ್ರೆ, ಯಾವ ಬ್ಯಾಂಕಲ್ಲಿ ಎಷ್ಟು ಇಂಟರೆಸ್ಟ್ ರೇಟ್ ಇದೆ ಅಂತ ನೋಡ್ಕೊಂಡ್ ಬರೋಣ ಬನ್ನಿ.
ಯಾವ ಬ್ಯಾಂಕಿನಲ್ಲಿ ಎಷ್ಟಿದೆ ಬಡ್ಡಿದರ?
ಬ್ಯಾಂಕ್ ಬಡ್ಡಿದರ
ಪಿಎನ್ ಬಿ 8.35%
ಬಿಒಬಿ 8.15%
ಇಂಡಿಯನ್ ಬ್ಯಾಂಕ್ 8.20%
ಬ್ಯಾಂಕ್ ಆಫ್ ಇಂಡಿಯಾ 8.35%
ಆರ್ ಬಿಐ ರೆಪೊ ದರವನ್ನು ಇಳಿಸಿದ ಬೆನ್ನಲ್ಲೇ ಪ್ರಮುಖ ಬ್ಯಾಂಕುಗಳು ಕೂಡ ಬಡ್ಡಿದರವನ್ನು ಇಳಿಕೆ ಮಾಡಿವೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿದರ ಇದೆ? ಎಷ್ಟು ಪ್ರೊಸೆಸಿಂಗ್ ಫೀಸ್ ಇದೆ ಎಂಬುದನ್ನು ತಿಳಿದುಕೊಂಡೇ ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ರೀತಿಯ ಬಡ್ಡಿ, ಪ್ರೊಸೆಸಿಂಗ್ ಫೀಸ್ ಇರುತ್ತದೆ ಎಂಬುದು ನಿಮಗೆ ಗೊತ್ತಿರಬೇಕು.
ಸಾಲ ಮಾಡುವ ಮುನ್ನ ತಿಳಿದಿರಲಿ ಹಲವು ಸಂಗತಿ
ಫ್ಲೋಟಿಂಗ್ ರೇಟ್ ಇದ್ದರೆ ಮಾತ್ರ ಬಡ್ಡಿ ಏರಿಳಿತ
ಫಿಕ್ಸೆಡ್ ಬಡ್ಡಿದರದ ಆಯ್ಕೆಯೂ ಇದೆ
ಗೃಹ ಸಾಲ ಸೇರಿ ಯಾವುದೇ ವೈಯಕ್ತಿಕ ಸಾಲ ಮಾಡುವ ಮುನ್ನ ಹಲವು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಅದರಲ್ಲೂ, ಫ್ಲೋಟಿಂಗ್ ಹಾಗೂ ಫಿಕ್ಸೆಡ್ ರೇಟ್ ಎಂಬ ವಿಷಯಗಳು ಗೊತ್ತಿರಬೇಕು. ಫ್ಲೋಟಿಂಗ್ ರೇಟ್ ಅಂದ್ರೆ, ನೀವು ಸಾಲ ಪಡೆಯುವಾಗ ಬಡ್ಡಿದರ ನಿಗದಿಯಾಗಿರುವುದು ಭವಿಷ್ಯದಲ್ಲಿ ಏರಿಕೆಯಾಗಬಹುದು ಅಥವಾ ಇಳಿಕೆಯೂ ಆಗಬಹುದು. ಆರ್ ಬಿ ಐ ರೆಪೊ ದರ ಏರಿಕೆಯಾದರೆ, ಬಡ್ಡಿದರ ಏರಿಕೆಯಾಗುತ್ತದೆ. ಇಳಿಕೆಯಾದರೆ ಬಡ್ಡಿ ಇಳಿಯುತ್ತದೆ. ಇದನ್ನೇ ಫ್ಲೋಟಿಂಗ್ ರೇಟ್ ಎಂದು ಕರೆಯುತ್ತಾರೆ.
ಇನ್ನು, ಫಿಕ್ಸೆಡ್ ಬಡ್ಡಿದರದಲ್ಲಿ ಬದಲಾವಣೆ ಆಗುವುದಿಲ್ಲ. ನೀವು ಸಾಲ ಪಡೆಯುವಾಗ ಎಷ್ಟು ಬಡ್ಡಿ ಇರುತ್ತದೆಯೋ, ಕೊನೆಯ ಇಎಂಐ ಕಟ್ಟುವಾಗಲೂ ಅಷ್ಟೇ ಇರುತ್ತದೆ. ಫ್ಲೋಟಿಂಗ್ ಬಡ್ಡಿದರದಲ್ಲಿ ರೆಪೊ ದರ ಇಳಿಕೆಯಾದರೆ, ಹೊರೆ ಕಡಿಮೆಯಾಗುತ್ತದೆ. ಏರಿಕೆಯಾದರೆ ಇಎಂಐ ಹೊರೆಯಾಗುತ್ತದೆ. ಇವುಗಳನ್ನು ಲೆಕ್ಕಾಚಾರ ಹಾಕಿಕೊಂಡು ಸಾಲ ಮಾಡಲು ಮುಂದಾಗಿ. ಹಾಂ, ಯಾವುದಕ್ಕೂ ತಜ್ಞರ ಸಲಹೆ ಪಡೆಯೋದನ್ನ ಮರೀಬೇಡಿ. ಆಲ್ ದಿ ಬೆಸ್ಟ್.