ಬೆಂಗಳೂರು: ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪ ಹೋಗುತ್ತಾ? ಎಂದು ಪ್ರಶ್ನಿಸಿದ್ದ ಖರ್ಗೆ ಅವರ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ಉತ್ತರ ಕೊಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಯುವಕ ಸಂಘದಿಂದ ನಡೆದ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಕೇಳಿದ್ದು ದೇಶದ ಹಿಂದುಗಳಿಗಲ್ಲ. ಬದಲಾಗಿ ಗಂಗೆಯಲ್ಲಿ ಮಿಂದೆದ್ದ ಗಾಂಧೀಜಿ, ಪಂಡಿತ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಎಂದು ಲೇವಡಿ ಮಾಡಿದ್ದಾರೆ.
‘ಶಿವಾಜಿ ಮಹಾರಾಜ ಹಿಂದೂ ಯುಗದ ಪ್ರವರ್ತಕ. ಮೊಘಲರ ವಿರುದ್ಧ ಹಿಂದೂಗಳು ಸೋಲಲ್ಲ, ಉತ್ತರ ನೀಡುತ್ತಾರೆ ಎಂಬುವುದನ್ನು ತೋರಿಸಿ ಕೊಟ್ಟಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಪ್ರಚಂಡ ಪರಾಕ್ರಮಿ ಎಂದು ಹೇಳಿದ್ದಾರೆ.
‘ಹಿಂದೂ ಧರ್ಮ ಎಂದರೆ ಶಾಂತಿ, ಇಸ್ಲಾಂ ಧರ್ಮ ಎಂದರೆ ಯುದ್ಧ. ಹಿಂದೂ ಧರ್ಮದ ಚರಿತ್ರೆ ಓದಿದರೆ ನಿಮಗೆ ಗೊತ್ತಾಗುತ್ತದೆ. ಅದು ಶಾಂತಿಯನ್ನೇ ಜಗತ್ತಿಗೆ ಸಾರಿದೆ. ಮಹಾ ಕುಂಭ ಮೇಳದಲ್ಲಿ ಬರೋಬ್ಬರಿ 60 ಕೋಟಿಗೂ ಅಧಿಕ ಹಿಂದೂಗಳು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.