ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಕೆಲವೊಮ್ಮೆ ಹಣ ಬೇಕಾಗುತ್ತದೆ. 10-20 ಸಾವಿರ ರೂಪಾಯಿ ಕೇಳಿದರೆ ಸ್ನೇಹಿತರು ಕೊಡುವುದಿಲ್ಲ. ಕಡಿಮೆ ಮೊತ್ತವನ್ನು ಬ್ಯಾಂಕಿನಲ್ಲೂ ಪಡೆಯಲು ಆಗುವುದಿಲ್ಲ. ಬ್ಯಾಂಕ್ ಪ್ರಕ್ರಿಯೆಯೂ ಜಾಸ್ತಿ ಇರುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ಬಳಸಿಕೊಂಡೇ 10 ಸಾವಿರ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ. ಹೌದು, ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಮೂಲಕ ಕ್ಷಿಪ್ರವಾಗಿ ಸಾಲ ಪಡೆಯಬಹುದಾಗಿದೆ.
ಸಾಲ ಪಡೆಯೋದು ಹೇಗೆ?
ಬ್ಯಾಂಕ್ ಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಸಾಲ ಪಡೆಯಬಹುದು. ಇಲ್ಲವೇ, ನೋ ಬ್ರೋಕರ್, ಇನ್ ಸ್ಟಾ ಕ್ಯಾಶ್ ಅಥವಾ ಕ್ರೆಡ್ ಮುದ್ರಾ ಸಂಸ್ಥೆಗಳ ಮೂಲಕವೂ ಸಾಲ ಪಡೆಯಬಹುದು. ಅವುಗಳ ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಯಾವ ದಾಖಲೆ ಬೇಕು?
ಸಾಲಕ್ಕೆ ಅನುಮೋದನೆ ನೀಡಲು ಬ್ಯಾಂಕ್ ಗಳು ಅಥವಾ ಹಣಕಾಸು ಸಂಸ್ಥೆಗಳು ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಕೇಳುತ್ತವೆ. ಅದರಲ್ಲೂ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸ್ಯಾಲರಿ ಸ್ಲಿಪ್ ನೀಡುವುದು ಕಡ್ಡಾಯವಾಗಿದೆ.
ಸಾಲ ಪಡೆಯಲು ಈ ಸಂಗತಿಗಳು ಪ್ರಮುಖ
- 18-60 ವರ್ಷದವರಿಗೆ ಮಾತ್ರ ಸಾಲ ನೀಡಲಾಗುತ್ತದೆ
- ಮಾಸಿಕ 12-15 ಸಾವಿರ ರೂಪಾಯಿ ಸಂಬಳ ಇರಲೇಬೇಕು
- 650-700 ಕ್ರೆಡಿಟ್ ಸ್ಕೋರ್ ಇದ್ದರೆ ಮಾತ್ರ ಸಾಲಕ್ಕೆ ಅನುಮೋದನೆ
- ಉದ್ಯೋಗ ಮಾತ್ರವಲ್ಲ, ಕಿರು ವ್ಯಾಪಾರಿಗಳಿಗೂ ಸಾಲ ನೀಡಲಾಗುತ್ತದೆ
- ಕನಿಷ್ಠ ಒಂದು ವರ್ಷ ಉದ್ಯೋಗಿಯಾಗಿ ಕೆಲಸ ಮಾಡಿದ ಅನುಭವ ಇರಬೇಕು
ಗಮನಿಸಿ: ನಾವಿಲ್ಲಿ ಸಾಲ ಪಡೆಯುವ ಕುರಿತು ಮಾಹಿತಿ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಿದ್ದೇವೆ. ಆ್ಯಪ್ ಗಳ ಮೂಲಕ ಸಾಲ ನೀಡುವುದಾಗಿ ವಂಚಿಸುವ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ, ಥರ್ಡ್ ಪಾರ್ಟಿ ಆ್ಯಪ್ ಗಳ ಮೂಲಕ ಸಾಲ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ. ಹಣಕಾಸು ತಜ್ಞರ ಸಲಹೆ ಪಡೆಯುವುದನ್ನು ಮರೆಯದಿರಿ.