ಬೆಂಗಳೂರು: ಇತ್ತೀಚೆಗೆ ಚಾಲಕರು ಅಜಾಗರೂಕತೆಯಿಂದ ಬಸ್ ಡ್ರೈವಿಂಗ್ (Bus driving) ಮಾಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಬಿಎಂಟಿಸಿ ಖಡಕ್ ಎಚ್ಚರಿಕೆ ರವಾನಿಸಿದೆ.
ಅಜಾಗರೂಕತೆ ಬಸ್ ಡ್ರೈವಿಂಗ್ ಮಾಡುವ ಬಿಎಂಟಿಸಿ(bmtc) ಡ್ರೈವರ್ ಗಳಿಗೆ ಇಲಾಖೆಯಿಂದ ಕೊನೆಯ ಎಚ್ಚರಿಕೆ ನೀಡಲಾಗಿದೆ. ಚಾಲಕರ ಅಜಾಗರೂಕತೆಯಿಂದಾಗಿ ಬಿಎಂಟಿಸಿ ಸಂಸ್ಥೆಗೆ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿ ಕೂಡ ಬಂದಿದೆ. ಹೀಗಾಗಿ ಸಂಸ್ಥೆ ಎಚ್ಚೆತ್ತುಕೊಂಡಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸಂಸ್ಥೆಯ ಡ್ರೈವರ್ ಗಳು ಮೊಬೈಲ್ ಬಳಸಿ, ಪೇಪರ್ ಓದುತ್ತ ಬಸ್ ಡ್ರೈವ್ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದಿವೆ. ಈ ಹಿಂದೆ ದೂರು ಬಂದರೆ ನೋಟಿಸ್ ನೀಡಿ ಸುಮ್ಮನಿರುತ್ತಿದ್ದರು. ಆದರೆ, ಈಗ ಈ ಕುರಿತು ದೂರು ಬಂದರೆ ಚಾಲಕರನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಹೀಗಾಗಿ ಇನ್ನು ಮುಂದೆ ಬಸ್ ಚಲಾಯಿಸುವಾಗ ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ. ಬಳಸಿದರೆ, ಕಠಿಣ ಕ್ರಮ ಮಾತ್ರ ಗ್ಯಾರಂಟಿ.