ಮಸೀದಿ ಮುಂದೆ ಡ್ಯಾನ್ಸ್ ಮಾಡಬಾರದು ಎಂದರೆ ಪಾಕಿಸ್ತಾನ್, ಬಾಂಗ್ಲಾದೇಶಕ್ಕೆ ಹೋಗಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಮುದಾಯದವರಿಗೆ ಗಣಪತಿ ಹಬ್ಬದ ಸಂಭ್ರಮಾಚರಣೆ ಸಹಿಸಲು ಆಗುತ್ತಿಲ್ಲ. ಅಂತಹ ವ್ಯಕ್ತಿಗಳು ಗಾಂಧಿ- ನೆಹರೂ ಸೇರಿ ಮಾಡಿರುವ ಪಾಕಿಸ್ತಾನಕ್ಕೆ ಹೋಗಬಹುದು.
ಮೋದಿ, ಯೋಗಿ ಇರುವವರೆಗೂ ನೀವು ಇಲ್ಲಿ ಬಾಲ ಬಿಚ್ಚಲು ಸಾಧ್ಯವಿಲ್ಲ. ಹಿಂದೂ ಧರ್ಮ ಸನಾತನ ಧರ್ಮವಾಗಿದ್ದು, ಅದು ದೇವರಿಂದ ಉದಯವಾದ ಧರ್ಮ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲೆಲ್ಲ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿವೆ. ದೇಶದಲ್ಲಿ ಹಿಂದೂಗಳು ಹೇಳಿದಂತೆ ದೇಶ ನಡೆಯಬೇಕು.
ಮುಸ್ಲಿಮರ ಮಸೀದಿ ಮುಂದೆ ಡ್ಯಾನ್ಸ್ ಮಾಡಬಾರದು, ಹಾಡು ಹಾಡಬಾರದು ಅಂದರೆ ಅವರಿಗಾಗಿ ಪ್ರತ್ಯೇಕವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದುಗಳಿಗೆ ಬುದ್ಧಿ ಬಂದಿಲ್ಲ. ಹಿಂದುಗಳು ಬುದ್ಧಿ ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.