ನವದೆಹಲಿ: ಪಾಕಿಸ್ತಾನ ತನ್ನ ಬುದ್ಧಿ ನಿಲ್ಲಿಸದಿದ್ದರೆ ಹೀಗೆ ಉತ್ತರ ಕೊಡುತ್ತಿರುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನೇತೃತ್ವದ ‘ಆಪರೇಷನ್ ಸಿಂಧೂರ್‘ ಕುರಿತಾದ MEA ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು MEA ವಕ್ತಾರ ರಣಧೀರ್ ಜೈಸ್ವಾಲ್ ಈ ವೇಳೆ ಹಾಜರಿದ್ದರು. ಪಾಕಿಸ್ತಾನವು ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಿಲ್ಲಿಸದಿದ್ದರೆ ಭಾರತವು ಅದಕ್ಕೆ ಸೂಕ್ತ ಉತ್ತರ ನೀಡುತ್ತಲೇ ಇರುತ್ತದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ.
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, ಇಂದು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದಿದ್ದಾರೆ. ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆ ತಟಸ್ಥಗೊಳಿಸಲಾಗಿದೆ” ಎಂದಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಹೆಚ್ಚಿಸಿದ್ದು, 16 ಜನ ಸಾವನ್ನಪ್ಪಿದ್ದಾರೆ. ಪಾಕಿಸ್ತಾನವೇ ಭಾರತವನ್ನು ಪ್ರತೀಕಾರಕ್ಕೆ ಒತ್ತಾಯಿಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ.
“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಹಲ್ಗಾಮ್ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ, ಪಾಕಿಸ್ತಾನವು ಟಿಆರ್‌ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಪಾತ್ರ ವಿರೋಧಿಸಿತು. ದಾಳಿಯ ಹೊಣೆಯನ್ನು ಟಿಆರ್‌ಎಫ್ ಒಮ್ಮೆ ಅಲ್ಲ, ಎರಡು ಬಾರಿ ಹೊತ್ತುಕೊಂಡ ನಂತರ ಪಾಕಿಸ್ತಾನ ಆ ದಾಳಿ ವಿರೋಧಿಸಿದೆ. ನಾವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಹೊಡೆದಿದ್ದೇವೆ. ಆದರೆ, ಪಾಕಿಸ್ತಾನ ಉಗ್ರರ ಮೃತದೆಹಗಳಿಗೆ ಸರ್ಕಾರಿ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.



















