ರಾಜ್ಯದಲ್ಲಿ ಸಿಎಂ ಬದಲಾವಣೆ ಕಡೆಗೂ ತಾರ್ಕಿಕ ಅಂತ್ಯ ಕಂಡಿದೆಯಾ? ಹಾಗೆ ನೋಡಿದರೆ ನಿನ್ನೆ ನಂದಿ ಬೆಟ್ಟದ ಭೋಗನಂದೀಶ್ವರ ದೇವರ ಸನ್ನಿಧಿಯಲ್ಲೇ ಸಿಎಂ ಸಿದ್ದರಾಮಯ್ಯ ಘಂಟಾಘೋಷವಾಗಿ ನಾನು ಪೂರ್ಣಾವಧಿ ಸಿಎಂ. ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲಾ. ಐದು ವರ್ಷ ಈ ಕಾಂಗ್ರೆಸ್ ಸರ್ಕಾರದಲ್ಲಿ ನಾನೇ ಸಿಎಂ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ಯಾರೆಲ್ಲಾ ಕುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದರೋ ಅವರಿಗೆಲ್ಲಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ರಣದೀಪ್ ಸುರ್ಜೇವಾಲ ಬಂದಿರುವುದೇ ಸಿದ್ದರಾಮಯ್ಯರನ್ನ ಕೆಳಗಿಳಿಸಲು ಅಂತಾ ಬಿಜೆಪಿ ನಾಯಕರು ಆರೋಪಿಸಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡ ಸಿದ್ದರಾಮಯ್ಯ ಕೇಸರಿ ಕಲಿಗಳ ಹೆಗಲ ಮೇಲೆ ಬಂದೂಕಿಟ್ಟು ತಮ್ಮ ಪ್ರತಿಸ್ಪರ್ಧಿ ಡಿ.ಕೆ. ಶಿವಕುಮಾರ್ ಗೆ ಗುರಿಯಿಟ್ಟಿದ್ದಾರೆ.
ಐದು ವರ್ಷಗಳ ಪೂರ್ಣಾವಧಿಗೂ ನಾನೇ ಸಿಎಂ ಅಂತಾ ಖಡಕ್ ಆಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲಾ ಐದು ವರ್ಷ ಈ ಸರ್ಕಾರ ಬಂಡೆಯಂತೆ ಸುಭದ್ರವಾಗಿರಲಿದೆ ಅಂತಲೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಕನಸು ಕಾಣ್ತಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿಗೆ ತಣ್ಣೀರೆರಚಿದಂತಾಗಿದೆ.