ಬೆಂಗಳೂರು: ಪತ್ನಿಯೋರ್ವಳು ಮಲಗೋಕು ಫೀಸ್ ಫಿಕ್ಸ್ ಮಾಡಿದ್ದಾಳಂತೆ. ಇದರಿಂದ ಬೇಸತ್ತ ಪತಿರಾಯ ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಸಂಸಾರ ಬೇಡ. ನನ್ನನ್ನು ಮುಟ್ಟಬೇಡ. ನನ್ನ ಬ್ಯೂಟಿ ಹಾಳಾಗತ್ತೆ ಎಂದು ಕಾಟ ಕೊಡುತ್ತಿದ್ದಾಳೆ ಎಂದು ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲದೇ, ಸಂಸಾರ ಮಾಡಲು ದಿನವೊಂದಕ್ಕೆ 5 ಸಾವಿರ ರೂ. ನೀಡುವಂತೆ ಬೇಡಿಕೆ ಜೊತೆಗೆ ಮಕ್ಕಳು ಬೇಡ ಎಂದು ಪತ್ನಿ ತನಗೆ ಕಿರುಕುಳ ಕೊಡುತ್ತಿರುವುದಾಗಿ ಆರೋಪಿಸಿ ಪತಿ ಶ್ರೀಕಾಂತ್ ಎನ್ನುವರು ಪತ್ನಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.