ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ನಡೆದ ಕೋರ್ ಕಮಿಟಿ ಸಭೆಯಲ್ಲಿ(Core Committee Meeting) ನನಗೆ ಬಹಳ ಬೇಸರವಾಗಿದ್ದು ನಿಜ. ನಾನು ಅದಕ್ಕೆಂದು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಬಾಗಿಲು ತಟ್ಟುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ನ್ಯೂಸ್ ಬೀಟ್ ಪ್ರತಿನಿಧಿ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಬಿ.ಶ್ರೀರಾಮುಲು,(B. Sriramulu) ನಾನು ದೆಹಲಿಗೆ ಹೋಗಿಲ್ಲ. ಸದ್ಯ ಬಳ್ಳಾರಿಯಲ್ಲಿದ್ದೇನೆ. ನಾನು ಇನ್ನೆರಡು ದಿನ ಬಿಟ್ಟು ಬೆಂಗಳೂರಿಗೆ ಬರುತ್ತೇನೆ. ಪಕ್ಷದಲ್ಲಿ ಆಗಿರುವ ಬೆಳವಣಿಗೆ ಬೇಸರ ತರಿಸಿದೆ ಎಂದು ತಿಳಿಸಿದ್ದಾರೆ.