ಬೆಳಗಾವಿ: ನಾನು ಯಾರಿಗೂ ಅಂಜುವ ಮಗನಲ್ಲ. ರಾಜ್ಯದ ಮಂತ್ರಿಗಿಂತ ನಾನು ಪವರ್ ಫುಲ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ್ ಅನ್ನುವುದು ಒಂದು ಶಕ್ತಿಯಾಗಿದೆ. ಕೇಂದ್ರದ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈಗ ನಮ್ಮ ಕ್ಷೇತ್ರದ ಜನರಿಂದ ಶಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ರಾಜ್ಯದ ಮಂತ್ರಿಗಳಿಗಿಂತಲೂ ಪವರ್ ಫುಲ್ ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಎಂ.ಬಿ. ಪಾಟೀಲ್ ಕಾಲು ಎಳೆಯುವ ಕಾರ್ಯ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದವರು ನೀರಾವರಿ ಸಚಿವರು ಆಗಿಲ್ಲ. ಅದಕ್ಕಾಗಿ ನಮಗೆ ನ್ಯಾಯ ಸಿಕ್ಕಿಲ್ಲ. ಉತ್ತರ ಕರ್ನಾಟಕ ಭಾಗದವರನ್ನು ನೀರಾವರಿ ಸಚಿವರನ್ನಾಗಿ ಮಾಡಿ. ಎಂ.ಬಿ. ಪಾಟೀಲ್, ಎಚ್. ಕೆ. ಪಾಟೀಲ್ ಇದ್ದಾಗ ಒಂದು ಕಳಕಳಿ ಇತ್ತು ಎಂದ ಯತ್ನಾಳ್, ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ನೀರಾವರಿ ಸಚಿವರಾಗಿರುವುದಕ್ಕೂ ವಿರೋಧ ಮಾಡಿದಂತೆ ಮಾತನಾಡಿದರು.