ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಚಿತ್ರಗಳು ಸತತವಾಗಿ ಸೋಲು ಕಾಣುತ್ತಿವೆ. ಹೀಗಾಗಿ ಈ ಸೋಲನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಮಧ್ಯೆ ಅಕ್ಷಯ್ ಕುಮಾರ್ ಗೆ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ಹೀಗಾಗಿ ಫ್ಯಾನ್ಸ್ ಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರ ಹಲವು ಚಿತ್ರಗಳು ಸಾಲು ಸಾಲು ಸೋಲು ಕಂಡಿವೆ. ಹೀಗಾಗಿ ಅವರ ಅಭಿಮಾನಿಗಳು ಅಕ್ಷಯ್ ಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರೆ, ಹಲವರು ವ್ಯಂಗ್ಯ ರೀತಿಯಾಗಿ ಮಾತನಾಡುತ್ತಿದ್ದಾರೆ. ಈ ಮಧ್ಯೆ ಗರಂ ಆಗಿರುವ ಅಕ್ಷಯ್ ಕುಮಾರ್ ನಾನು ಸೋತಿದ್ದೇನೆ. ಸತ್ತಿಲ್ಲ ಎಂದು ಹೇಳಿದ್ದಾರೆ.
ಸೋಲಿನ ಸುಳಿಯಲ್ಲಿ ಸಿಲುಕಿರುವ ಅಕ್ಷಯ್ ಗೆ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ. ಸೋಲಿನ ಬಗ್ಗೆ ನಾನು ಹೆಚ್ಚು ಯೋಚಿಸಲ್ಲ. ಕೇವಲ ನಾಲ್ಕೈದು ಚಿತ್ರಗಳು ಓಡಲಿಲ್ಲ ಎಂಬ ಕಾರಣಕ್ಕೆ ನಾನು ಸತ್ತೇ ಹೋದ ರೀತಿಯಲ್ಲಿ ಸಂತಾಪ ಕಳುಹಿಸುತ್ತಿದ್ದಾರೆ. ಕಂ ಬ್ಯಾಕ್ ಮಾಡಿಯೇ ಮಾಡುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ. ಇಲ್ಲೆ ಇರುವೆ. ನಾನು ಕಷ್ಟಪಟ್ಟು ಸಂಪಾದಿಸುತ್ತಿದ್ದೇನೆಯೇ ಹೊರತು, ಯಾರ ಬಲಿಯೂ ಬೇಡಿ ಬದುಕುತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ಅಕ್ಷಯ್ ಕುಮಾರ್ ಅವರ ಹಲವು ಚಿತ್ರಗಳು ಸೋತು ಸುಣ್ಣವಾಗಿವೆ. ಸೆಲ್ಫಿ, ಓ ಮೈ ಗಾಡ್ 2, ಮಿಶನ್ ರಾಣಿಗಂಜ್, ಬಡೆ ಮಿಯಾನ್ ಚೋಟೆ ಮಿಯಾನ್ ಸೇರಿದಂತೆ ಕೆಲವು ಚಿತ್ರಗಳು ಸೋತ ಬೆನ್ನಲ್ಲಿಯೇ ಇತ್ತೀಚೆಗಷ್ಟೇ ಬಂದಿದ್ದ ಸರ್ಫಿರಾ ಚಿತ್ರ ಕೂಡ ಅದೇ ಹಾದಿ ಹಿಡಿದಿತ್ತು. ಹೀಗಾಗಿ ಹಲವರು ಅಕ್ಷಯ್ ಗೆ ವ್ಯಂಗ್ಯವಾಡುತ್ತಿದ್ದಾರೆ. ಈ ಮಧ್ಯೆ ಅಕ್ಷಯ್ ಮತ್ತೆ ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.