ಬೆಳಗಾವಿ : ಪ್ರೇಯಸಿ ಜೊತೆ ಲಾಡ್ಜ್‌ನಲ್ಲಿ ಸರಸವಾಡುತ್ತಿದ್ದಾಗ ಪತಿಯೊಬ್ಬ ಪತ್ನಿ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಪತಿಯನ್ನು ಕಂಡ ಪತ್ನಿ ಆತನನ್ನು ದರದರನೆ ರಸ್ತೆಗೆ ಎಳೆದು ತಂದು ಚಪ್ಪಲಿಯಿಂದ ಸಾರ್ವಜನಿಕವಾಗಿ ಥಳಿಸಿದ್ದಾಳೆ.
ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಚಿಕ್ಕೋಡಿ ನಿವಾಸಿ ಅವಿನಾಶ್ ಭೋಸಲೆ ಎಂಬಾತ ರೂಂ ಬುಕ್ ಮಾಡಿ ಪ್ರೇಯಸಿ ಜೊತೆ ತಂಗಿದ್ದನು. ಈ ವಿಷಯ ಗೊತ್ತಾದ ಕೂಡಲೇ ಪತ್ನಿ ಲಾಡ್ಜ್ ಗೆ ಬಂದಿದ್ದು ಪತಿಯನ್ನು ನೋಡಿ ಆಕ್ರೋಶಗೊಂಡಿದ್ದಾಳೆ. ಕೂಡಲೇ ಆತನನ್ನು ಅಲ್ಲಿಂದ ಹೊರಗೆ ಎಳೆದೊಯ್ದು ಚಪ್ಪಲಿಯಿಂದ ಥಳಿಸಿದ್ದಾಳೆ.
ಈ ದೃಶ್ಯವನ್ನು ಸಾರ್ವಜನಿಕರು ನಿಂತುಕೊಂಡು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಿಳೆಯನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಸದ್ಯ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಹುಲಿ ದಾಳಿಯ ಭೀತಿ | ಅರಣ್ಯ ಇಲಾಖೆಯಿಂದ ರೈತರಿಗೆ ಸೆಕ್ಯುರಿಟಿ ವ್ಯವಸ್ಥೆ



















