ಕೋಲಾರ: ರಸ್ತೆಯ ಮೇಲ್ಭಾಗದ ಸೇತುವೆಗೆ ಬೃಹತ್ ಟ್ರಕ್ ವೊಂದು ಡಿಕ್ಕಿ ಹೊಡೆದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಫೈಲೆಟ್ಸ್ ಸರ್ಕಲ್ ನಲ್ಲಿ ನಡೆದಿದೆ.
ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ನಲ್ಲಿ ತೆರಳದೆ, ರಾಜ್ಯ ಹೆದ್ದಾರಿ ಮಾರ್ಗವಾಗಿ ತೆರಳುವಾಗ ಟ್ರಕ್ ಚಾಲಕ ರಸ್ತೆ ಬ್ರಿಡ್ಜ್ ನ ಎತ್ತರ ಅರಿಯದೆ ಏಕಾಏಕಿ ಆಗಮಿಸಿದಾಗ ಈ ಅವಘಡ ಸಂಭವಿಸಿದೆ.
ಮಹಾರಾಷ್ಟ್ರದಿಂದ ಆಂಧ್ರದ ಪಂತನಪಲ್ಲಿ ಕಡೆಗೆ ಹೊರಟಿದ್ದ ಟ್ರಕ್, ಸೇತುವೆಯ ಮೇಲ್ಭಾಗಕ್ಕೆ ಡಿಕ್ಕಿಯಾಗಿ ಒಂದು ಗಂಟೆಯ ಕಾಲ ಕೆಳಗೆ ಸಿಲುಕಿದ ಟ್ರಕ್ ನ್ನು ಬೆಮೆಲ್ ನಗರ ಠಾಣೆಯ ಪೊಲೀಸರು ಕ್ರೇನ್ ಮೂಲಕ ಪಕ್ಕಕ್ಕೆ ಸರಿಸಿದ್ದಾರೆ.
ಚಿನ್ನದ ಗಣಿಗಾರಿಕೆ ನಡೆಯುವ ವೇಳೆಯಲ್ಲಿ ಸರಕು ಸಾಗಾಣಿಕೆಗೆ ಈ ಬ್ರಿಡ್ಜ್ ನ್ನು ನಿರ್ಮಿಸಲಾಗಿತ್ತು. ಸೇತುವೆ ಕೆಳಗೆ ಟ್ರಕ್ ಸಿಲುಕಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.