ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ರೋಹಿತ್ ಶರ್ಮಾಗಾಗಿ ಹಲವು ಫ್ರಾಂಚೈಸಿಗಳು ತಂತ್ರ ಹೆಣೆಯುತ್ತಿವೆ ಎಂದು ತಿಳಿದು ಬಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಮೆಗಾ ಹರಾಜಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿವೆ ಎಂದು ವರಿಯಾಗಿದೆ. ಮುಂಬಯಿ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡವು ನಾಯಕತ್ವದಿಂದ ಕೆಳಗೆ ಇಳಿಸಿದ್ದಕ್ಕೆ ಅವರು ಹರಾಜಿನಲ್ಲಿ ಕಾಣಿಸಲಿದ್ದಾರೆ.
ರೋಹಿತ್ ಶರ್ಮಾ ಅವರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬರುವುದಂತು ಖಚಿತ ಎನ್ನಲಾಗುತ್ತಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಯಶಸ್ವಿ ನಾಯಕನ ಮೇಲೆ ಬಹುತೇಕ ಫ್ರಾಂಚೈಸಿಗಳು ದೃಷ್ಟಿ ನೆಟ್ಟಿವೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳಂತೂ ರೋಹಿತ್ ಶರ್ಮಾರಿಗಾಗಿ ಕಾಯುತ್ತಿವೆ. ರೋಹಿತ್ ಶರ್ಮಾ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರಿಗಾಗಿ ಡೆಲ್ಲಿ ಹಾಗೂ ಲಕ್ನೋ ಫ್ರಾಂಚೈಸಿಗಳು ಬೃಹತ್ ಮೊತ್ತದವರೆಗೆ ಬಿಡ್ಡಿಂಗ್ ನಡೆಸಲು ಮುಂದಾಗಿವೆ ಎಂದು ತಿಳಿದು ಬಂದಿದೆ.
ರೋಹಿತ್ ಶರ್ಮಾ ಅವರಿಗಾಗಿಯೇ ಈ ಎರಡು ಫ್ರಾಂಚೈಸಿಗಳು 50 ಕೋಟಿ ರೂ. ಕಾಯ್ದಿರಿಸಲಿವೆ. ಅಂದರೆ ಒಟ್ಟು ಹರಾಜು ಮೊತ್ತದಿಂದ 50 ಕೋಟಿ ರೂ. ಅನ್ನು ಹಿಟ್ಮ್ಯಾನ್ ಖರೀದಿಗಾಗಿ ತೆಗೆದಿಡಲು ನಿರ್ಧರಿಸಿವೆ ಎನ್ನಲಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರಬಂದು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಭರ್ಜರಿ ಪೈಪೋಟಿ ಕಂಡು ಬರುವುದಂತು ಖಚಿತವಾಗಿದೆ. ಈ ಮೂಲಕ ರೋಹಿತ್ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದರೂ ಅಚ್ಚರಿಪಡಬೇಕಿಲ್ಲ.