ಬೆಂಗಳೂರು: ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ (India vs England) ತೀವ್ರ ಹಿನ್ನಡೆ ಉಂಟಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿ 2ನೇ ಪಂದ್ಯ ತಪ್ಪಿಸಿಕೊಂಡಿದ್ದ ಆಲ್ರೌಂಡರ್ ಜೇಕಬ್ ಬೆಥೆಲ್ (Jacob Bethell) ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ದೀರ್ಘಕಾಲ ಕ್ರಿಕೆಟ್ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಗಾಯದಿಂದಾಗಿ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಲಿದ್ದಾರೆ. ಅದೇ ರೀತಿ ತಮ್ಮ ಚೊಚ್ಚಲ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವುದೂ ಅನುಮಾನ.
ಬೆಥೆಲ್ ಅವರ ಸ್ಕ್ಯಾನ್ ವರದಿ ಪ್ರಕಾರ, ಎಡಗೈ ಆಟಗಾರ ನಾಲ್ಕರಿಂದ ಆರು ವಾರಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟಾಮ್ ಬ್ಯಾಂಟನ್ 3ನೇ ಏಕದಿನಕ್ಕೆ ಇಂಗ್ಲೆಂಡ್ ತಂಡ ಸೇರಿದ್ದಾರೆ. ಅವರು ಎಂಐ ಎಮಿರೇಟ್ಸ್ ಪರ ಅವರು 2 ಶತಕ ಬಾರಿಸಿ ಮಿಂಚಿದ್ದರು. ಸ್ನಾಯು ಸೆಳೆತಕ್ಕೆಒಳಗಾಗಿದ್ದ ವಿಕೆಟ್ ಕೀಪರ್ ಜೇಮೀ ಸ್ಮಿತ್ 3ನೇ ಏಕದಿನ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆಯಿದೆ.
ಬೆಥೆಲ್ ಆರ್ಸಿಬಿಗೂ ಅಲಭ್ಯ?
ಬೆಥೆಲ್ ಆರ್ಸಿಬಿ ಪರ ಆರಂಭಿಕ ಹಂತದ ಒಂದೆರಡು ಪಂದ್ಯಗಳನ್ನು ಸಹ ಕಳೆದುಕೊಳ್ಳುವ ಸಾಧ್ಯತೆ ಇದೆ. ಚಾಂಪಿಯನ್ಸ್ ಟ್ರೋಫಿಯಿಂದ ಬೆಥೆಲ್ ಅವರನ್ನು ಹೊರಗಿಡಲಾಗುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಭಾನುವಾರ ಹೇಳಿದ್ದಾರೆ. ಇದು ಅವರಿಗೆ ನಿಜವಾಗಿಯೂ ನಿರಾಶಾದಾಯಕ. ಇತ್ತೀಚೆಗೆ ಅವರು ಅದ್ಭುತ ಪ್ರದರ್ಶನ ನೀಡಿದ್ದರು ಎಂದು ಬಟ್ಲರ್ ಹೇಳಿದ್ದಾರೆ.
ಇದನ್ನೂ ಓದಿ: ಭರ್ಜರಿ ದಾಖಲೆ ಬರೆದ ಬೂಮ್ ಬೂಮ್ ಬುಮ್ರಾ!
ಜೋಶ್ ಹೇಜಲ್ವುಡ್ ಕೂಡ ಅಲಭ್ಯ?
ಆಸ್ಟ್ರೇಲಿಯಾದ ವೇಗಿ ಹೇಜಲ್ವುಡ್, ಕಾಲಿನ ಹಿ೦ಭಾಗದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯ ಕಾರಣ ಐಸಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದೂವರೆ ತಿಂಗಳು ಇರುವ ಕಾರಣ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ.