ಬೆಳಗಾವಿ: ಜಿಲ್ಲೆಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಸಂಭವಿಸಿದ ಅಘಾತಕಾರಿ ಘಟನೆಯಲ್ಲಿ ಅಕ್ಟೋಬರ್ 13ರಿಂದ 16ರ ಅವಧಿಯಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಬ್ಯಾಕ್ಟೀರಿಯಾದಿಂದ ಎನ್ನುವುದು ಈಗ ದೃಢಪಟ್ಟಿದೆ.
ಮೃಗಾಲಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೃಷ್ಣ ಮೃಗಗಳ ಸಾವು ಸಂಭವಿಸುತ್ತಿದೆ. ಅವಶ್ಯಕ ಔಷಧಿಯನ್ನು ನೀಡಲಾಗುತ್ತಿದೆ. ಅದರೆ ಆ ಪ್ರಾಣಿಗಳಿಗೆ ಬಂದ ರೋಗದ ಕುರಿತು ಅಧ್ಯಯನ ಮಾಡಲು ಶವಪರೀಕ್ಷೆ ನಡೆಸಿ, ಇದೀಗ ಇವುಗಳಿಗೆ ಹರಡಿರುವುದು ಎಚ್ಎಸ್ ಬ್ಯಾಕ್ಟೀರಿಯಾ ಎಂದು ವರದಿ ತಿಳಿಸಿದೆ.
ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಜ್ಞ ಡಾ. ಚಂದ್ರಶೇಖರ್ ಅವರನ್ನು ತಕ್ಷಣ ಬೆಳಗಾವಿಗೆ ಕಳುಹಿಸಲಾಗಿತ್ತು. ಅವರು ಮೃಗಾಲಯದ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಂಯುಕ್ತ ತನಿಖೆಯ ಬಳಿಕ, HS ಎಂಬ ತೀವ್ರವಾಗಿ ಹರಡುವ ಬ್ಯಾಕ್ಟೀರಿಯಾ ಸೋಂಕು ಕೃಷ್ಣ ಮೃಗಗಳಲ್ಲಿ ವೇಗವಾಗಿ ವ್ಯಾಪಿಸಿರುವುದು ಸ್ಪಷ್ಟ ಎಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಸರ್ಕಾರವಾಗಲಿ, ಸಿಬ್ಬಂದಿಯಾಗಲಿ ಈ ಘಟನೆಯನ್ನು ಬರಿ ರೋಗಕ್ಕೆ ಹೋಲಿಕೆ ಮಾಡಿ ನುಣಚಿಕೊಳ್ಳುವ ಕಾರ್ಯವಾಗಬಾರದು, ಇಲ್ಲಿ ಕೆಲವು ಗಮನಿಸುವ ಅಂಶಗಳೆಂದರೇ ರೋಗ ಹೇಗೆ ಹರಡಿತು, ಅಲ್ಲದೇ ಇಲ್ಲಿ ಮೃಗಾಲಯ ಸಿಬ್ಬಂದಿಯ ಹೊಣೆಗಾರಿಕೆ ಆ ಸಮಯದಲ್ಲಿ ಏನಾಗಿತ್ತು? ಎಂಬ ಸಾವಿರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಇದರ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅಲ್ಲದೇ ತಪ್ಪಿತಸ್ಥತರಿಗೆ ಕಠಿಣ ಶಿಕ್ಷೆಯಾಗಬೇಕು. ಆಗಮಾತ್ರ ಸರ್ಕಾರ ಹಾಗೂ ಇಲಾಖೆ ಮೇಲೆ ನಂಬಿಕೆ ಉಳಿಯಲು ಸಾಧ್ಯ ಎಂದು ಪ್ರಾಣಿ ಪ್ರಿಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ಸಿಎಸ್‌ಕೆ ಆನ್-ಫೀಲ್ಡ್ ಕ್ಯಾಪ್ಟನ್ ಧೋನಿ, ರುತುರಾಜ್ ಕೇವಲ ಕಾಗದದ ಮೇಲೆ : ಮೊಹಮ್ಮದ್ ಕೈಫ್



















