ಹ್ಯಾಂಡಸಮ್ ಹಂಕ್ ಎಂದೇ ಖ್ಯಾತಿ ಪಡೆದಿರುವ ಹೃತಿಕ್ ರೋಷನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ ? ಸಾಮಾಜಿಕ ಜಾಲತಾಣಗಳಲ್ಲಿ ಎಂದಿಗೂ ಟ್ರೆಂಡಿಗ್‌ನಲ್ಲಿರುತ್ತಾರೆ. ಹೃತಿಕ್ ಹಾಗೂ ಅವರ ಪತ್ನಿ ಸುಸ್ಸಾನೆ ಖಾನ್ ದಂಪತಿ ಈಗಾಗಲೇ ವಿಚ್ಛೇದನಾ ಪಡೆದು ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಹೃತಿಕ್ ರೋಷನ್ ಈಗ ತಮಗಿಂತ 12 ವರ್ಷ ಚಿಕ್ಕ ವಯಸ್ಸಿನ ಸಬಾ ಆಜಾದ್ ಜೊತೆ ಡೇಟ್ ಮಾಡುತ್ತಿರುವ ವಿಚಾರ ತಿಳಿದಿದೆ. ಆದರೆ, ಇವರಿಬ್ಬರ ನಡುವೆ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ಹೃತಿಕ್ ರೋಷನ್ ತಮ್ಮ ಮಾಲೀಕತ್ವದ ಸಮುದ್ರಕ್ಕೆ ಎದುರಾಗಿರುವ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಸಬಾ ಆಜಾದ್ ಅವರಿಗೆ ಬಾಡಿಗೆಗೆ ನೀಡಿದ್ದಾರೆ ಎನ್ನಲಾಗ್ತಿದೆ.
ಈ ಅಪಾರ್ಟ್ಮೆಂಟ್ 1000-1,300 ಚದರ ಅಡಿ ಇದ್ದು ಇದರ ಬಾಡಿಗೆ ಪ್ರಸ್ತುತ 1 ಲಕ್ಷದಿಂದ 3 ಲಕ್ಷದವರೆಗೆ ಇದೆ. ಆದರೆ, ಹೃತಿಕ್ ರೋಷನ್ ತನ್ನ ಅಪಾರ್ಟ್ಮೆಂಟ್ ಅನ್ನು ಗೆಳತಿ ಸಬಾ ಆಜಾದ್‌ಗೆ 75,000 ರೂ.ಗೆ ಬಾಡಿಗೆಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಬಾ ಆಜಾದ್ ದಿಲ್ ಕಬಡ್ಡಿ, ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಇತ್ತೀಚೆಗೆ ವಾರ್ 2 ಸಿನಿಮಾದ ಮೂಲಕ ಸಾಕಷ್ಟು ಸುದ್ದಿಯಾಗಿದ್ದು, ಮುಂದಿನ ಸಿನಿಮಾಗಳಿಗೆ ತಯಾರಿ ಮಾಡಕೊಳ್ಳುತ್ತಿದ್ದಾರೆ.