ಬೆಂಗಳೂರು: ಹೊಸ ಸಿಮ್ ಕಾರ್ಡ್ ಪಡೆಯಲು, ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವುದು ಸೇರಿ ಬಹುತೇಕ ಚಟುವಟಿಕೆಗಳಿಗೆ ಈಗ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ, ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹಾಗಾಗಿ, ಆಧಾರ್ ಕಾರ್ಡ್ ಮಾಹಿತಿಯು ನಿಖರವಾಗಿರುತ್ತದೆ. 10-15 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದವರು, ವಿಳಾಸ ಬದಲಾದವರು ಈಗ ಆನ್ ಲೈನ್ ನಲ್ಲೇ ನವೀಕೃತ ಮಾಹಿತಿಯನ್ನು ಅಪ್ಡೇಟ್ ಮಾಡಬಹುದಾಗಿದೆ.
ಹೌದು, ಹೆಸರು ತಪ್ಪಾಗಿದ್ದರೆ ಸರಿಪಡಿಸುವುದು. ಜನ್ಮದಿನಾಂಕ, ವಾಸಸ್ಥಳದ ಮಾಹಿತಿಯನ್ನು ಆನ್ ಲೈನ್ ಮೂಲಕವೇ ಅಪ್ಡೇಟ್ ಮಾಡಬಹುದಾಗಿದೆ. ಇದಕ್ಕಾಗಿ ಕೆಲ ಪ್ರಕ್ರಿಯೆಗಳನ್ನು ಅನುಸರಿಸಿದರೆ, ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ಅನ್ನು ಆನ್ ಲೈನ್ ನಲ್ಲೇ ಪಡೆಯಬಹುದಾಗಿದೆ.
ದಾಖಲೆ ನವೀಕರಣ ಹೇಗೆ?
- ಅಧಿಕೃತ https://myaadhaar.uidai.gov.in ಪೋರ್ಟಲ್ ಗೆ ಭೇಟಿ ನೀಡಬೇಕು.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಬೇಕು.
- ನಂತರ ನೋಂದಾಯಿತ ಮೊಬೈಲ್ ಗೆ ಬಂದ ಒಟಿಪಿ ಬಳಸಿ ಲಾಗಿನ್ ಆಗಬೇಕು.
- “Document Update” ವಿಭಾಗವನ್ನು ಆಯ್ಕೆಮಾಡಬೇಕು.
- ಹೊಸ ವಿಳಾಸದ ಅಥವಾ ವಿವರದ ದಾಖಲೆ ಸ್ಕ್ಯಾನ್ ಮಾಡಬೇಕು
- ನಂತರ, ನಿಮಗೆ URN ನೀಡಲಾಗುತ್ತದೆ. ನಂತರ ಅದನ್ನು ಬಳಸಿ ನವೀಕರಣ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
- ಅನುಮೋದನೆಯಾದ ಬಳಿಕ, ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು
ಆದರೆ, ಎಲ್ಲವನ್ನೂ ಆನ್ ಲೈನ್ ಮೂಲಕವೇ ಅಪ್ಡೇಟ್ ಮಾಡಲು ಆಗುವುದಿಲ್ಲ. ಬೆರಳಚ್ಚು, ಐರಿಸ್ ಸ್ಕ್ಯಾನ್ ಅಥವಾ ಫೋಟೋದಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಆನ್ ಲೈನ್ನಲ್ಲಿ ನವೀಕರಿಸಲು ಸಾಧ್ಯವಿಲ್ಲ. ಈ ನವೀಕರಣಕ್ಕಾಗಿ ನೀವು ಖುದ್ದಾಗಿ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಸಮೀಪದ ಆಧಾರ್ ನೋಂದಣಿ ಕೇಂದ್ರದಲ್ಲಿ ಸ್ವಲ್ಪ ಶುಲ್ಕವನ್ನೂ ವಿಧಿಸಲಾಗುತ್ತದೆ.