ಬೆಂಗಳೂರು: ಜನರ ದುಡಿಮೆ, ಅವಶ್ಯಕತೆ, ಇತ್ತೀಚೆಗೆ ಜಿಎಸ್ ಟಿ ಇಳಿಕೆ ಮಾಡಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರುಗಳನ್ನು ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಆದರೆ, ತುಂಬ ಜನರಿಗೆ ಕಾರು ಖರೀದಿಸುವಾಗ ಪಾವತಿಸಿದ ತೆರಿಗೆ ಹಣವನ್ನು ಬಳಿಕ ರಿಫಂಡ್ ಪಡೆಯಬಹುದು ಎಂಬ ಸಂಗತಿ ಗೊತ್ತಿರುವುದಿಲ್ಲ. ಅರೆ ಇದು ಹೇಗೆ? ರಿಫಂಡ್ ಪಡೆಯುವುದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
ಹೌದು, ನೀವು 10 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರು ಖರೀದಿಸಿದರೆ. ನಿಮಗೆ ತೆರಿಗೆ ರಿಫಂಡ್ ಲಭಿಸುತ್ತದೆ. ಕಾರು ಖರೀದಿಸುವಾಗ ಶೋರೂಮ್ ನಲ್ಲಿ ಕಾರಿನ ಮೊತ್ತದ ಶೇ.1ರಷ್ಟು ಟ್ಯಾಕ್ಸ್ ಕಲೆಕ್ಟೆಟ್ ಅಟ್ ಸೋರ್ಸ್ (ಟಿಸಿಎಸ್) ವಿಧಿಸಲಾಗುತ್ತದೆ. ಅಂದರೆ, ನೀವು 10 ಲಕ್ಷ ರೂ. ಕಾರು ಖರೀದಿಸಿದ್ದರೆ, 10 ಸಾವಿರ ರೂ. ಟಿಸಿಎಸ್ ಪಾವತಿಸಿರುತ್ತೀರಿ. ಆದರೆ, ಬಳಿಕ ಈ ಟಿಸಿಎಸ್ ಮೊತ್ತವನ್ನು ನೀವು ರಿಫಂಡ್ ಪಡೆಯಬಹುದಾಗಿದೆ.
ಹೀಗೆ, ನೀವು 20 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದರೆ, 20 ಸಾವಿರ ರೂಪಾಯಿ, 30 ಲಕ್ಷ ರೂ. ಕಾರಿಗೆ 30 ಸಾವಿರ ರೂ. ಟಿಸಿಎಸ್ ಹಣವನ್ನು ರಿಫಂಡ್ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.
ರಿಫಂಡ್ ಪಡೆಯೋದು ಹೇಗೆ?
• ಕಾರು ಖರೀದಿಸಿದ ಶೋರೂಮ್ ಅಥವಾ ಡೀಲರ್ ನಿಂದ ಫಾರ್ಮ್ 27 ಡಿ ಪಡೆಯಿರಿ
• ನೀವು ಐಟಿಆರ್ ಪೈಲ್ ಮಾಡುವಾಗ ಫಾರ್ಮ್ 26ಎಎಸ್ ಗಮನಿಸಿ
• ಅಲ್ಲಿ ನಿಮ್ಮ ಟಿಸಿಎಸ್ ಮೊತ್ತ ನಮೂದಾಗಿದೆಯೇ ಎಂಬುದನ್ನು ಪರಿಶೀಲಿಸಿ
• ನೀವು ಐಟಿಆರ್ ಸಲ್ಲಿಸಿದ ಬಳಿಕ ಟಿಸಿಎಸ್ ರಿಫಂಡ್ ಆಗುತ್ತದೆ
• ಗಮನಿಸಿ, ಇದು ಐಟಿಆರ್ ಸಲ್ಲಿಸಿದರೆ ಮಾತ್ರ ಲಭಿಸುವ ರಿಫಂಡ್ ಆಗಿದೆ
ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ | ಮುಂಬೈನಲ್ಲಿ ತುರ್ತು ಭೂಸ್ಪರ್ಶ!



















