ಮೊದಲೆಲ್ಲ ನಾವು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿ, ಕಚೇರಿ ಅಲೆದು ಸುಸ್ತಾಗುತಿತ್ತು. ಆದರೆ, ಸರ್ಕಾರ ಈಗ ಜಾತಿ-ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಮನೆಯಲ್ಲಿಯೇ ಕುಳಿತುಕೊಂಡು ಪಡೆಯುವ ಸೌಲಭ್ಯವನ್ನು ಜಾರಿಗೆ ತಂದಿದೆ. ಈ ಮೂಲಕ ಕೇವಲ 5 ನಿಮಿಷಗಳಲ್ಲಿ ನೀವೀಗ ನಿಮ್ಮ ಮೊಬೈಲ್‌ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಆದದಾ ಒಂದೇ ವಾರದಲ್ಲಿ ಜಾತಿ-ಆದಾಯ ಪ್ರಮಾಣ ಪತ್ರ ನಿಮ್ಮ ಕೈಸೇರಲಿದೆ.
ಹೌದು.. ಸುಲಭವಾಗಿ ಜಾತಿ-ಆದಾಯ ಪ್ರಮಾಣ ಪತ್ರವನ್ನು ಪಡೆಯಲು ನಮ್ಮಲ್ಲಿ ಕೆಲವೇ ಕೆಲವು ದಾಖಲೆಗಳಿದ್ದರೆ ಸಾಕು. ಸ್ವತಃ ನೀವೇ ಯಾರ ಸಹಾಯವಿಲ್ಲದೆ ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಪ್ರಮುಖವಾಗಿ ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿದ್ಯಾರ್ಥಿಗಳಾಗಿದ್ದರೆ ಐಡಿ ಕಾರ್ಡ್ ಇರಬೇಕು. ಇಷ್ಟಿದ್ದರೆ, ಸುಲಭವಾಗಿ ಜಾತಿ-ಆದಾಯ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ನೀವು ಪೂರ್ಣಗೊಳಿಸಬಹುದು.
ಈ ಪ್ರಕ್ರಿಯೆಗೆ 50 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ನಿಮ್ಮ ಡೆಬಿಟ್ ಕಾರ್ಡ್‌ನಿಂದ ಅಥವಾ ನೆಟ್ ಬ್ಯಾಂಕಿಂಗ್‌ನಿಂದ ಈ ಹಣವನ್ನು ಪಾವತಿಸಿಬೇಕು. ಹಾಗಾದರೆ, ನಿಮಿಷಗಳಲ್ಲೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ಓದಿ.
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಗೂಗಲ್ ಗೆ ತೆರಳಿ ಅಲ್ಲಿ https://indianiq.in ಎಂದು ಸರ್ಚ್ ಮಾಡಿ ವೆಬ್ ಸೈಟ್ ಗೆ ಭೇಟಿ ನೀಡಿ, ಆ ಬಳಿಕ ಸರ್ಚ್ ನಲ್ಲಿ INCOME ಅಂತಾ ಟೈಪ್ ಮಾಡಿದಾಗ ಒಂದು ಆರ್ಟಿಕಲ್ ಬರುತ್ತೆ, ಅಲ್ಲಿಂದ ಕೆಳಗೆ ಹೋದಾಗ ಅಲ್ಲಿ Apply Now ಎಂಬಲ್ಲಿ ಕ್ಲಿಕ್ ಮಾಡಬೇಕು. ತದನಂತರ ನಿಮ್ಮ ಡೀಟೇಲ್ಸ್ ಗಳನ್ನು ಅಲ್ಲಿ ತುಂಬಿ, 50 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ನೀವು ಪೂರ್ಣಗೊಳಿಸಿದರೆ ಕೇವಲ ಒಂದೇ ವಾರದಲ್ಲಿ ನಿಮ್ಮ ಮನೆ ಬಾಗಿಲಿಗೆ ಜಾತಿ-ಆದಾಯ ಪ್ರಮಾಣಪತ್ರ ತಲುಪಲಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರ ಬೆಂಗಳೂರಿನ ಸಸ್ಯಕಾಶಿಗೆ ಗುಂಡಿ ತೋಡುವ ಕೆಲಸ ಮಾಡುತ್ತಿದೆ ; ಆರ್. ಅಶೋಕ್ ಕಿಡಿ



















