ಬೆಂಗಳೂರು: ನಾವು ಬ್ಯಾಂಕ್ ಗಳಲ್ಲಿ ತೆರೆಯುವ ಉಳಿತಾಯ, ಎಫ್ ಡಿ ಸೇರಿ ಯಾವುದೇ ಖಾತೆಗಳಿಗೆ ನಾಮಿನಿಗಳನ್ನು ಸೇರಿಸುವುದು ಅತ್ಯವಶ್ಯಕವಾಗಿದೆ. ಅಕಸ್ಮಾತ್, ನಮಗೇನಾದರೂ ಆದರೆ, ನಮ್ಮ ಹಣವು ನಮ್ಮ ತಂದೆ-ತಾಯಿ, ಹೆಂಡತಿ ಸೇರಿ ಯಾರಿಗೇ ಆಗಲಿ ಸೇರಬೇಕು ಎಂದರೆ, ಅವರನ್ನು ನಾವು ನಾಮಿನಿಗಳನ್ನಾಗಿ ಮಾಡಬೇಕು. ಈ ನಾಮಿನಿಯನ್ನು ಸೇರಿಸುವುದು ಈಗ ಸುಲಭವಾಗಿದೆ. ಆನ್ ಲೈನ್ ಮೂಲಕವೇ ಮನೆಯಲ್ಲೇ ಕುಳಿತು ನಾಮಿನಿಯನ್ನು ಸೇರಿಸಬಹುದಾಗಿದೆ. ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ನಾಮಿನಿಯನ್ನು ಸೇರಿಸುವುದು ಹೇಗೆ?
– ಮೊದಲು ನೀವು ನಿಮ್ಮ ಬ್ಯಾಂಕಿನ ನೆಟ್ ಬ್ಯಾಂಕಿಂಗ್ಗೆ ಲಾಗಿನ್ ಆಗಬೇಕು. ಅಲ್ಲಿ Services ಅಥವಾ Requests ವಿಭಾಗಕ್ಕೆ ಹೋಗಬೇಕು.
– ಬಳಿಕ Register Nominee ಅಥವಾ Update Nominee ಆಯ್ಕೆಯನ್ನು ಹುಡುಕಬೇಕು.
– ನಾಮಿನಿಯ ಹೆಸರು, ಜನ್ಮ ದಿನಾಂಕ, ನಿಮ್ಮೊಂದಿಗಿನ ಸಂಬಂಧ ಮತ್ತು ಅವರ ವಿಳಾಸದಂತಹ ವಿವರಗಳನ್ನು ಭರ್ತಿ ಮಾಡಬೇಕು. ವಿವರಗಳನ್ನು ಸಲ್ಲಿಸಿದ ನಂತರ, ನಿಮ್ಮ ಮೊಬೈಲ್ಗೆ ಬರುವ ಒಟಿಪಿ ಬರುತ್ತದೆ. ಅದನ್ನು ನಮೂಸಿದಿರೆ, ನೀವು ನಾಮಿನಿಯನ್ನು ಸೇರಿಸಿದಂತೆಯೇ.
ಬ್ಯಾಂಕ್ ಖಾತೆಗಳಿಗೆ ಮಾತ್ರವಲ್ಲ, ನೀವು ಕೆಲಸ ಮಾಡುವ ಕಂಪನಿಯ ಇಪಿಎಫ್ಒ ಖಾತೆ, ಮ್ಯೂಚುವಲ್ ಫಂಡ್, ಎಫ್ ಡಿ ಹೂಡಿಕೆ ಸೇರಿ ಯಾವುದೇ ಮಾದರಿಯ ಖಾತೆಗಳಿಗೂ ನಾಮಿನಿಯನ್ನು ಸೇರಿಸುವುದು ಮುಖ್ಯವಾಗಿದೆ. ಅದರಲ್ಲೂ, ಟರ್ಮ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್ ಖಾತೆಗಳಿಗಂತೂ ನಾಮಿನಿಯನ್ನು ಸೇರಿಸುವುದು ಕಡ್ಡಾಯವಾಗಿದೆ. ಹಾಗಾಗಿ, ಖಾತೆದಾರರು ನಾಮಿನಿಯನ್ನು ಸೇರಿಸುವುದು ಬಹುಮುಖ್ಯ ಕೆಲಸವಾಗಿದೆ.