ಕೊಲೆ ಆರೋಪಿ ದರ್ಶನ್ ಗೆ ಜಾಮೀನು ಸಿಕ್ಕಿದ್ದು, ಆರು ವಾರಗಳಿಗೆ ಜಾಮೀನು ಅವಧಿ ಮುಕ್ತಾಯವಾಗಲಿದೆ. ಮಧ್ಯಂತರ ಜಾಮೀನು ಆದೇಶ ರದ್ದಾದ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಸೆಷನ್ಸ್ ಕೋರ್ಟ್ ಸೂಚನೆಯಂತೆ ಜಾಮೀನು ಪ್ರತಿಯ್ನು ಇ-ಮೇಲ್ ಮೂಲಕ ಬಳ್ಳಾರಿ ಜೈಲಿಗೆ ಕಳಿಸಲಾಗಿದೆ. ಜೊತೆಗೆ ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸಹ ಬೇಗನೆ ಪೂರೈಸಲಾಗಿದೆ.
ಜಾಮೀನು ಪಡೆಯಲು ಕೆಲ ವ್ಯಕ್ತಿಗಳು ಶೂರಿಟಿ ನೀಡುವ ಜೊತೆಗೆ ನಿಗದಿತ ಹಣವನ್ನು ಡೆಪಾಸಿಟ್ ಇಡಬೇಕಾಗುತ್ತದೆ. ದರ್ಶನ್ ಅವರ ಸ್ವಂತ ಸಹೋದರ ದಿನಕರ್ ತೂಗುದೀಪ್ ಹಾಗೂ ಧನ್ವೀರ್ ಗೌಡ ಮಾಡಿದರು. ದಿನಕರ್ ತೂಗುದೀಪ್ ಮತ್ತು ಧನ್ವೀರ್ ಗೌಡ ಅವರುಗಳು ದರ್ಶನ್ಗೆ ಜಾಮೀನಿಗೆ ಶೂರಿಟಿ ಹಾಕಿದ್ದಲ್ಲದೇ, ಎರಡು ಲಕ್ಷ ರೂ. ಹಣ ಡೆಪಾಸಿಟ್ ಸಹ ಮಾಡಿದ್ದಾರೆ. ಅಲ್ಲದೆ ಸೆಷನ್ಸ್ ನ್ಯಾಯಾಲಯದಲ್ಲಿ ಪಾಸ್ಪೋರ್ಟ್ ನ್ನು ವಶಕ್ಕೆ ನೀಡಲಾಗಿದೆ.
ಒಂದು ವಾರದಲ್ಲಿ ವೈದ್ಯಕೀಯ ವರದಿ, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ, ಯಾವ ರೀತಿಯ ಚಿಕಿತ್ಸೆ ಸೇರಿದಂತೆ ಎಲ್ಲ ಮಾಹಿತಿಗಲನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಯಾವುದೇ ಸಾಕ್ಷ್ಯಗಳನ್ನು ಸಂಪರ್ಕ ಮಾಡಬಾರದು. ಯಾವುದೇ ಸಾಕ್ಷಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು. ಸಾಕ್ಷ್ಯಗಳನ್ನು ನಾಶ ಮಾಡುವ ಪ್ರಯತ್ನ ಮಾಡಬಾರದು. ಜಾಮೀನು ನೀಡಿರುವ ಉದ್ದೇಶದ ಹೊರತಾಗಿ ಬೇರೆ ಕಾರ್ಯಕ್ಕೆ ಬಳಸಬಾರದು ಸೇರಿದಂತೆ ಕೆಲವು ನಿಯಮಗಳನ್ನು ನೀಡಲಾಗಿದೆ.