ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮಗಳು ಯಾವ ಶಾಲೆಗೆ ಹೋಗುತ್ತಾಳೆ? ಅವರ ಓದಿಗೆ ರೋಹಿತ್ ಎಷ್ಟು ಖರ್ಚು ಮಾಡುತ್ತಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿತ್ತು. ಈಗ ಈ ಚರ್ಚೆಗೆ ಉತ್ತರ ಸಿಕ್ಕಿದೆ.
ರೋಹಿತ್ ಹಾಗೂ ರಿತಿಕಾ ದಂಪತಿಯ ಪುತ್ರಿ ಸಮೈರಾ, ಮುಂಬೈನ ಪ್ರತಿಷ್ಠಿತ ಶಾಲೆಗೆ ಅಡ್ಮಿಷನ್ ಮಾಡಿಸಿದ್ದಾರೆ. ಧೀರೂಬಾಯಿ ಅಂಬಾನಿ ಶಾಲೆಗೆ ಪ್ರವೇಶ ಪಡೆದಿರುವ ಸಮೈರಾ ಓದಿಗೆ ರೋಹಿತ್ ಭಾರೀ ಪ್ರಮಾಣದಲ್ಲಿ ಖರ್ಚು ಮಾಡುತ್ತಾರೆ ಎಂಬುವ ಸುದ್ದಿ ವೈರಲ್ ಆಗಿದೆ. ಧೀರೂಬಾಯಿ ಅಂಬಾನಿ ಶಾಲೆಗೆ ಹೋಗುತ್ತಿರುವ ಸಮೈರಾ ಒಂದು ವರ್ಷದ ಫೀಸ್ ಬರೋಬ್ಬರಿ 14 ರಿಂದ 20 ಲಕ್ಷ ರೂ.
ಅತಿರಥರ ಮಕ್ಕಳಿಗೆ ಅಂಬಾನಿ ಶಾಲೆ ಅಚ್ಚುಮೆಚ್ಚು!
ಮುಂಬೈನ ಧೀರಾಬಾಯಿ ಅಂಬಾನಿ ಶಾಲೆಯಲ್ಲಿ ಕೆಜಿಯಿಂದ 12ನೇ ತರಗತಿವರೆಗೂ ಶಿಕ್ಷಣ ನೀಡಲಾಗುತ್ತಿದೆ. ಐಸಿಎಸ್ ಸಿ ಸೇರಿದಂತೆ ವಿಶ್ವದರ್ಜೆಯ ಶಿಕ್ಷಣವನ್ನು ಇಲ್ಲಿನ ಮಕ್ಕಳಿಗೆ ನೀಡಲಾಗುತ್ತಿದೆ. ಹಾಗಂತಾ ಕೇವಲ ರೋಹಿತ್ ಮಾತ್ರವಲ್ಲ, ಬಾಲಿವುಡ್ ಸೇರಿದಂತೆ ಹಲವು ವಲಯಗಳ ಖ್ಯಾತನಾಮರ ಮಕ್ಕಳಿಗೂ ಧೀರೂಬಾಯಿ ಅಂಬಾನಿ ಶಾಲೆಯೇ ಅಚ್ಚುಮೆಚ್ಚು.
ಅಭಿಷೇಕ್-ಐಶ್ವರ್ಯ ಪುತ್ರಿ ಆರಾಧ್ಯ, ಶಾರುಖ್ ಪುತ್ರ ಅಬ್ರಾಂ, ಸೈಫ್-ಕರೀನಾ ಪುತ್ರ ತೈಮೂರ್ ಕೂಡಾ ಇದೇ ಶಾಲೆಯ ವಿದ್ಯಾರ್ಥಿಗಳು. ಇದೇ ಶಾಲೆಯಲ್ಲೇ ಸಚಿನ್ ಪುತ್ರಿ ಸಾರಾ, ನಟಿ ಅನನ್ಯ ಪಾಂಡೆ, ಶಾರುಖ್ ಪುತ್ರ, ನಟಿ ಜಾಹ್ನವಿ, ಖುಷಿ ಕಪೂರ್ ಕೂಡಾ ಇಲ್ಲಿಂದಲೇ ಪಾಸ್ ಆಗಿ ಬಂದವರು ಎಂಬುವುದು ವಿಶೇಷ. ಈ ಸುದ್ದಿ ಕೇಳಿದ್ದೇ ತಡ ಈಗ ಶಾಲೆಯಲ್ಲಿ ಅಂಥಾದ್ದೇನಿದೆ? ಇಷ್ಟೊಂದು ಫೀಸ್ ಪಡೆದು ಅಲ್ಲಿ ಏನು ಕಲಿಸುತ್ತಾರೆ? ಯಾವ ರೀತಿಯ ಶಿಕ್ಷಣ ವ್ಯವಸ್ಥೆ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.