ಭರ್ಜರಿ ಪ್ರದರ್ಶನ ಕಾಣುತ್ತ ಮುನ್ನುಗ್ಗುತ್ತಿರುವ ‘ಪುಷ್ಪ 2’ ಸಿನಿಮಾ ಮೂರನೇ ದಿನವೂ ಉತ್ತಮ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅವರ ನಟನೆಗೆ ಅಭಿಮಾನಿಗಳು ಸಖತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳು ಕೂಡ ಜನರನ್ನು ರಂಜಿಸುತ್ತಿವೆ. ಹೀಗಾಗಿ ಭರ್ಜರಿ ಕಲೆಕ್ಷನ್ ಮಾಡುತ್ತ ಚಿತ್ರ ಮುನ್ನುಗ್ಗುತ್ತಿದೆ.
ಡಿ. 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆಯಾಗಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲೆಡೆಯೂ ಹೌಸ್ಫುಲ್ ಆಗಿದೆ. ವೀಕೆಂಡ್ ಇರುವುದರಿಂದ ಮತ್ತಷ್ಟು ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಹಲವಾರು ದಾಖಲೆಗಳನ್ನು ಚಿತ್ರ ಮಾಡಿದೆ. ವಿಶ್ವಾದ್ಯಂತ ಬರೋಬ್ಬರಿ 621 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಚಿತ್ರತಂಡವೇ ಮಾಹಿತಿ ನೀಡಿದೆ.
ಪುಷ್ಪ 2’ ಸಿನಿಮಾಗೆ ಬಂಡವಾಳ ಹೂಡಿರುವ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಸೋಶಿಯಲ್ ಮೀಡಿಯಾ ಮೂಲಕ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ. ಈ ಚಿತ್ರವು ಈಗ ವಿಶ್ವದಾದ್ಯಂತ 3 ದಿನಕ್ಕೆ 621 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎಲ್ಲ ರಾಜ್ಯಗಳಲ್ಲೂ ಅಭಿಮಾನಿಗಳು ಈ ಚಿತ್ರವನ್ನು ಮೆಚ್ಚುತ್ತಿದ್ದಾರೆ. ಹೀಗಾಗಿ ಚಿತ್ರವು ಭರ್ಜರಿ ಗಳಿಕೆ ಮಾಡುತ್ತಿದೆ.