ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಫೈರಿಂಗ್ ಗೆ ಬಳಸಿದ ಗನ್ ಗುರುತು ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ 12(Twelve) ಬೋರ್ ಗನ್ ಬಳಕೆ ಮಾಡಿರುವ ಕುರಿತು ಮಾಹಿತಿ ಸಿಕ್ಕಿದೆ.
12 ಬೋರ್ ಗನ್ ಶಾರ್ಟ್ ಗನ್ ಗುರುತು ಪತ್ತೆಯಾಗಿವೆ. ಸ್ಥಳದಲ್ಲಿ ಸಿಕ್ಕ ಕಾಟ್ರೆಡ್ಜ್, ಗುಂಡುಗಳ ಪರಿಶೀಲನೆಯಿಂದ ಮಾಹಿತಿ ಹೊರ ಬಿದ್ದಿದೆ. ಪೊಲೀಸರು ಹಾಗೂ ಎಫ್ಎಸ್ಎಲ್ ತಂಡದಿಂದ ಬುಲೆಟ್ ಮತ್ತು ಕಾಟ್ರೆಡ್ಜ್ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ 12 ಬೋರ್ ಗನ್ ನಲ್ಲಿ ಬಳಸುವ ಬುಲೆಟ್ ಮತ್ತು ಕಾಟ್ರೆಡ್ಜ್ ಎಂಬುವುದು ಪತ್ತೆಯಾಗಿದೆ. ಶೂಟರ್ 12 ಬೋರ್ ಶಾರ್ಟ್ ಗನ್ ಫೈರ್ ಮಾಡಿದ್ದಾನೆ. ಈ ಬಗ್ಗೆ ಸೊಕೋ ಮತ್ತು ಎಫ್ಎಸ್ಎಲ್ ತಂಡಗಳು ತನಿಖೆ ಮುಂದುವರೆಸಿವೆ. ಶೂಟರ್ 12 ಬೋರ್ ಗನ್ ನಿಂದ ಕ್ಲೋಸ್ ಫೈರ್ ಮಾಡಿದ್ದಾನೆ. 12 ಬೋರ್ ಗನ್ ನಿಂದ 40- 60 ಮೀಟರ್ ಅಂತರದಿಂದ ಫೈರ್ ಮಾಡಿರಬಹುದು ಎನ್ನಲಾಗಿದೆ.
ಈ ವೇಳೆ 50 ಮೀಟರ್ ಅಂತರದಲ್ಲಿ ಫೈರಿಂಗ್ ಆಗಿರುವ ಕುರಿತು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹೀಗಾಗಿ ರಿಕ್ಕಿ ರೈ ಮೇಲೆ 12 ಬೋರ್ ಗನ್ ನಿಂದ ಫೈರ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಕುರಿತು ಸ್ಪೆಷಲ್ ಟೀಮ್ ತನಿಖೆ ಮುಂದುವರೆಸಿದೆ.



















