ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಸೈಬರ್ ವಂಚನೆಯ ಪ್ರಕರಣಗಳು ಕೂಡ ಜನರನ್ನು ಬೆಚ್ಚಿ ಬೀಳಿಸುವಂತಿವೆ.
ನಗರದಲ್ಲಿ 2024 ರಲ್ಲಿ 176 ಕೊಲೆಗಳು ನಡೆದಿವೆ. ಈ ಪೈಕಿ 3 ಕೊಲೆ ಪ್ರಕರಣಗಳನ್ನು ಪೊಲೀಸರಿಗೆ ಇನ್ನೂ ಬೇಧಿಸಲು ಆಗಿಲ್ಲ.
2023ರಲ್ಲಿ 206 ಕೊಲೆಗಳು ನಡೆದಿದ್ದವು. 206 ಕೊಲೆ ಕೇಸ್ ನಲ್ಲಿ 202 ಕೊಲೆ ಕೇಸ್ ಪತ್ತೆಯಾಗಿತ್ತು. ಈ ಪೈಕಿ ನಾಲ್ಕು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೊಲೆಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುವುದೇ ಸಮಾಧಾನ.
ಅಲ್ಲದೇ, 2023ರಲ್ಲಿ 537 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 450 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಆದರೆ, ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಮೂರು ಪಟ್ಟು ಹೆಚ್ಚಳವಾಗಿದೆ. 2024ರಲ್ಲಿ ಬೆಂಗಳೂರಿನ ಜನತೆ ಸೈಬರ್ ಕ್ರೈಂಗೆ ಅಕ್ಷರಶಃ ಬಲಿಯಾಗಿದ್ದಾರೆ. ಬರೋಬ್ಬರಿ 17,495 ಜನರು ವಂಚನೆಗೊಳೊಪಟ್ಟಿದ್ದಾರೆ. ಇಷ್ಟು ಜನರಿಂದ 18,00,57,17,886 ರೂ. ವಂಚನೆ ಮಾಡಲಾಗಿದೆ. 2023ರಲ್ಲಿ 17,600 ಕೇಸ್ ದಾಖಲಾಗಿ ಆರು ನೂರು ಕೋಟಿ ಹಣ ವಂಚನೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಸೈಬರ್ ವಂಚನೆಯ ಹಣದ ಮೊತ್ತ ಹೆಚ್ಚಾಗಿದೆ. ಈ ಅಂಕಿ-ಅಂಶ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.