ನವದೆಹಲಿ: ಜಗತ್ತಿನ ಬಿಲಿಯನೇರ್ ಗಳ ಪಟ್ಟಿ ಹೊರ ಬಿದ್ದಿದ್ದು, ಭಾರತಕ್ಕೆ ಮೂರನೇ ಸ್ಥಾನ ಸಿಕ್ಕಿದೆ.
ಅತಿಹೆಚ್ಚು ಬಿಲಿಯನೇರ್ ಗಲನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ. ಭಾರತಕ್ಕಿಂತ ಜಿಡಿಪಿಯಲ್ಲಿ ಮೇಲಿರುವ ಜರ್ಮನಿ ಮತ್ತು ಜಪಾನ್ ದೇಶದಲ್ಲಿ ಕುಬೇರರ ಸಂಖ್ಯೆ ಕಡಿಮೆ ಇದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಜಪಾನ್ ದೇಶ ಬಿಲಿಯನೇರ್ ಗಳ ಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿದೆ.
ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನೇರ್ ಗಳಿದ್ದಾರೆ. ಅಮೆರಿಕದಲ್ಲಿನ ಅರ್ಧದಷ್ಟು ಬಿಲಿಯನೇರ್ ಗಳು ಚೀನಾದಲ್ಲಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ 200 ಜನ ಬಿಲಿಯನೇರ್ ಗಳಿದ್ದಾರೆ. ಅಮೆರಿಕ ಮತ್ತು ಚೀನಾದಲ್ಲಿ ಕ್ರಮವಾಗಿ 813 ಮತ್ತು 406 ಬಿಲಿಯನೇರ್ಸ್ ಇದ್ದಾರೆ.

ಆದರೆ, ನೂರಕ್ಕಿಂತ ಹೆಚ್ಚು ಬಿಲಿಯನೇರ್ಸ್ ಹೊಂದಿರುವ ದೇಶಗಳ ಸಂಖ್ಯೆ ಐದು ಮಾತ್ರ. ಈ ಐವರ ಪಟ್ಟಿಯಲ್ಲಿ ಜರ್ಮನಿ ಮತ್ತು ರಷ್ಯಾ ಸೇರಿವೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಅತಿ ಹೆಚ್ಚು ಕುಬೇರರು ಇರುವುದು ಚೀನಾ ಮತ್ತು ಭಾರತದಲ್ಲಿ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ನ ಎಕ್ಸ್ ಅಕೌಂಟ್ನಲ್ಲಿ ಟಾಪ್ 40 ಪಟ್ಟಿ ಪ್ರಕಟವಾಗಿದೆ.
ಅತಿಹೆಚ್ಚು ಬಿಲಿಯನೇರ್ಸ್ ಇರುವ ದೇಶಗಳ ಪಟ್ಟಿ ಹೀಗಿದೆ….
- ಅಮೆರಿಕ: 813
- ಚೀನಾ: 406
- ಭಾರತ: 200
- ಜರ್ಮನಿ: 132
- ರಷ್ಯಾ: 120
- ಇಟಲಿ: 73
- ಬ್ರೆಜಿಲ್: 69
- ಹಾಂಕಾಂಗ್: 67
- ಕೆನಡಾ: 67
- ಬ್ರಿಟನ್: 55
- ಫ್ರಾನ್ಸ್: 53
- ತೈವಾನ್: 51
- ಆಸ್ಟ್ರೇಲಿಯಾ: 48
- ಸ್ವೀಡನ್: 43
- ಸ್ವಿಟ್ಜರ್ಲ್ಯಾಂಡ್: 41
- ಜಪಾನ್: 41
- ಸಿಂಗಾಪುರ್: 39
- ಇಸ್ರೇಲ್: 36
- ಸೌತ್ ಕೊರಿಯಾ: 36
- ಇಂಡೋನೇಷ್ಯಾ: 35
- ಸ್ಪೇನ್: 29
- ಟರ್ಕಿಯೆ: 27
- ಥಾಯ್ಲೆಂಡ್: 26
- ಮೆಕ್ಸಿಕೋ: 22
- ಮಲೇಷ್ಯಾ: 17
- ಫಿಲಿಪ್ಪೈನ್ಸ್: 16
- ನೆದರ್ಲ್ಯಾಂಡ್ಸ್: 14
- ನಾರ್ವೆ: 12
- ಚೆಕ್ ರಿಪಬ್ಲಿಕ್: 11
- ಐರ್ಲೆಂಡ್: 11
- ಸೈಪ್ರಸ್: 10
- ಗ್ರೀಸ್: 10
- ಬೆಲ್ಜಿಯಂ: 10
- ಆಸ್ಟ್ರಿಯಾ: 9
- ಡೆನ್ಮಾರ್ಕ್: 9
- ಪೋಲ್ಯಾಂಡ್: 8
- ಫಿನ್ಲ್ಯಾಂಡ್: 7
- ಚಿಲಿ: 6
- ಕಜಕಸ್ತಾನ್: 6
- ವಿಯೆಟ್ನಾಂ: 6 ಸ್ಥಾನ ಪಡೆದಿವೆ.
ದಕ್ಷಿಣ ಏಷ್ಯನ್ ಭಾಗದಲ್ಲಿ ಭಾರತ ಬಿಟ್ಟರೆ ಹೆಚ್ಚು ಬಿಲಿಯನೇರ್ ಗಳಿರುವು ಪಾಕಿಸ್ತಾನದಲ್ಲಿ. ಭಾರತದಲ್ಲಿ 200 ಜನ ಬಿಲಿಯನೇರ್ ಗಳಿದ್ದರೆ, ಪಾಕ್ ನಲ್ಲಿ ಕೇವಲ ನಾಲ್ಕು ಜನ ಇದ್ದಾರೆ. ಶಾಹಿದ್ ಖಾನ್ 11.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪಾಕಿಸ್ತಾನದ ಅತಿ ಶ್ರೀಮಂತ ಎನಿಸಿದ್ದಾರೆ. ಮಿಯಾನ್ ಮುಹಮ್ಮದ್ ಮನ್ಶಾ, ಅನ್ವರ್ ಪರ್ವೆಜ್ ಮತ್ತು ನಾಸಿರ್ ಶೋನ್ ಇನ್ನುಳಿದ ಬಿಲಿಯನೇರ್ ಗಳು ಆಗಿದ್ದಾರೆ.



















