ರಾಯಚೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ನಗರದ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ.
ವಿದ್ಯಾ (30) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ನಗರದ ಸೈನ್ಸ್ ಸೆಂಟರ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆಯನ್ನು 2 ವರ್ಷದ ಹಿಂದೆ ಮಂಜುನಾಥ ಎಂಬ ಮೆಡಿಕಲ್ ರೆಪ್ರೆಸೆಂಟೇಟಿವ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕಳೆದ ಆರು ತಿಂಗಳಿನಿಂದ ವರದಕ್ಷಿಣೆಗಾಗಿ ಪತಿ ಮಂಜುನಾಥ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇಂದು ಬೆಳಗ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಮನೆಯ ಹಾಲ್‌ನಲ್ಲಿ ಶವವಾಗಿ ಮಲಗಿದ್ದಳು. ವಿದ್ಯಾ ಸಾವು ಕೊಲೆ ಎಂದು ಆರೋಪಿಸಿದ ವಿದ್ಯಾ ಕುಟುಂಬಸ್ಥರು, ಪತಿ ಮಂಜುನಾಥ ಹಾಗೂ ಅತ್ತೆ ಆಗಾಗ ಹಣ ತರುವಂತೆ ಪೀಡಿಸ್ತಿದ್ದರು ಎಂದು ದೂರಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಪಂಚನಾಮೆಗಾಗಿ ಡೆಪ್ಯೂಟಿ ತಹಶಿಲ್ದಾರ ಹಾಗೂ ಡಿವೈಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ; ‘ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ’ ಎಂದಿದ್ದ ಟ್ರಂಪ್‌ಗೆ ಅಜ್ಞಾತ ಸ್ಥಳದಿಂದಲೇ ಮೊಜ್ತಾಬಾ ಖಮೇನಿ ಪ್ರತಿಕ್ರಿಯೆ!



















