ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ. ಎಸ್.ಎ ಗ್ರಾಮದಲ್ಲಿ ಮನೆ ಕುಸಿದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಳೆಯಿಂದ ಸಂಪೂರ್ಣ ತೇವಗೊಂಡಿದ್ದ ಕಲ್ಲು ಮಣ್ಣಿನಿಂದ ನಿರ್ಮಿಸಿದ ಹಳೆಯ ಮನೆ ಕುಸಿದು ಬಾಲಕನ ಮೇಲೆ ಬಿದ್ದಿದೆ. ಈ ವೇಳೆ ಮನೆಯವರೆಲ್ಲ ಹೊಲಕ್ಕೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ಅಜ್ಜಿ ಮತ್ತು ಮೊಮ್ಮಗ ಮಾತ್ರ ಮನೆಯಲ್ಲಿದ್ದರು. ಘಟನೆಯಲ್ಲಿ 10 ವರ್ಷದ ಬಾಲಕ ಚಂದ್ರು ಹವಾಲ್ದಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, 60 ವರ್ಷದ ಅಜ್ಜಿ ಭಾಗಮ್ಮ ಪರಿಸ್ಥಿತಿ ಗಂಭೀರವಾಗಿದೆ. ಅಜ್ಜಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.