ಬೆಂಗಳೂರಿನಲ್ಲಿ ಹೈಟೆಕ್ ಸ್ಪಾ ನಡೆಸುತ್ತಿದ್ದ ಮಾಲೀಕನ ಮೇಲೆ ಪೊಲೀಸ್ ಇಲಾಖೆ ಗೂಂಡಾ ಕಾಯಿದೆ ಜಾರಿಮಾಡಿದೆ.
ಬಂಧಿತ ಆರೋಪಿಯನ್ನು ಅನಿಲ್ ಕುಮಾರ್ ರೆಡ್ಡಿ ಎಂದು ಗುರುತಿಸಲಾಗಿದೆ. ಕೆ.ಆರ್. ಪುರದ ಟಿನ್ ಪ್ಯಾಕ್ಟರಿ ಬಳಿಯಿದ್ದ ನಿರ್ವಣ ಇಂಟರ್ನ್ಯಾಷನಲ್ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ಜನವರಿಯಲ್ಲಿ ದಾಳಿ ನಡೆಸಿದ್ದರು.
ದಾಳಿ ವೇಳೆ ಥಾಯ್ಲೆಂಡ್ ಮಹಿಳೆಯರು ಸೇರಿದಂತೆ 44 ಮಹಿಳೆಯರನ್ನು ರಕ್ಷಿಸಲಾಗಿತ್ತು. ಬಂಧಿತ ಆರೋಪಿ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಕಡೆಯಿಂದ ಯುವತಿಯರನ್ನು, ಮಹಿಳೆಯರನ್ನು ಕರೆತರುತ್ತಿದ್ದ. ಬೆಂಗಳೂರಿಗೆ ಕೆಲಸಕ್ಕೆಂದು ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ. ದಾಳಿಯ ನಂತರ ಪೊಲೀಸರು ಸ್ಪಾ ಬಂದ್ ಮಾಡಿದ್ದರು. ಅಲ್ಲದೇ, ಆರೋಪಿಯ ವಿರುದ್ಧ ರೇಪ್ ಸೇರಿದಂತೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು.
ಹೀಗಾಗಿ ಪೊಲೀಸರು ಅನಿಲ್ ರೆಡ್ಡಿ ವಿರುದ್ದ ಗೂಂಡಾ ಕಾಯ್ದೆ ವರದಿ ಸಿದ್ಧಪಡಿಸಿದ್ದರು. ವರದಿ ಆಧರಿಸಿ ರೆಡ್ಡಿ ವಿರುದ್ದ ಪೊಲೀಸ್ ಕಮಿಷನರ್ ಬಿ.ದಯಾನಂದ ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ.