ಬೆಂಗಳೂರು: ನನ್ನ ತಂದೆ ಹಾಗೂ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದಾಗಿ ಸಚಿವ ಕೆ.ಎನ್. ರಾಜಣ್ಣ (KN Rajanna) ಪುತ್ರ ರಾಜೇಂದ್ರ ರಾಜಣ್ಣ ಆರೋಪಿಸಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿಂದು ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿರುವುದಾಗಿ ಸಚಿವ ರಾಜಣ್ಣ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಅವರ ಪುತ್ರ ಕೂಡ ಈ ಕುರಿತು ಮಾತನಾಡಿದ್ದಾರೆ.
ನನ್ನ ತಂದೆ, ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ನನಗೆ ಈಗಲೂ ಕರೆಗಳು ಬರುತ್ತಿವೆ. ಈ ಕುರಿತು ದೂರು ನೀಡುತ್ತೇವೆ ಎಂದಿದ್ದಾರೆ.
ನನ್ನ ತಂದೆ ಮೇಲೆ ಎರಡು ಸಲ ಹನಿಟ್ರ್ಯಾಪ್ ಯತ್ನ ಆಗಿದೆ. ಈ ಕುರಿತು ಆದಷ್ಟು ಬೇಗ ತನಿಖೆ ನಡೆಯಬೇಕು. ಅಲ್ಲದೇ, ಸಿಎಂ ಅವರಿಗೂ ದೂರು ನೀಡುತ್ತೇವೆ ಅಂದಿದ್ದಾರೆ.