ಬೆಂಗಳೂರು: ಸೈಟ್ ಇದೆ, ಚೆಂದದೊಂದು ಮನೆ ಕಟ್ಟಿಸಬೇಕು. ಅಪಾರ್ಟ್ ಮೆಂಟ್ ಖರೀದಿಸಬೇಕು ಎಂದು ಹೆಚ್ಚಿನ ಜನ ಗೃಹಸಾಲಕ್ಕೆ ಅರ್ಜಿ ಹಾಕುತ್ತಾರೆ. ಉತ್ತಮ ಸಂಬಳ ಇರುವುದರಿಂದ ಮಾಸಿಕ ಇಎಂಐ ಮೂಲಕ ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳುವುದು ಅವರ ಉದ್ದೇಶವಾಗಿರುತ್ತದೆ. ಆದರೆ, ಕೆಲವೊಂದು ಸಲ ಸಣ್ಣ ಸಣ್ಣ ತಪ್ಪುಗಳಿಂದ ಗೃಹ ಸಾಲದ ಅರ್ಜಿಯನ್ನು ಬ್ಯಾಂಕುಗಳು ರಿಜೆಕ್ಟ್ ಮಾಡುತ್ತವೆ. ಹಾಗೆ, ರಿಜೆಕ್ಟ್ ಮಾಡಬಾರದು ಎಂದರೆ ಕೆಲವೊಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆ ಕ್ರಮಗಳು ಹೀಗಿವೆ…
- ಕ್ರೆಡಿಟ್ ರೇಟಿಂಗ್ ಉತ್ತಮವಾಗಿರಲಿ
ಗೃಹ ಸಾಲಕ್ಕೆ ಅರ್ಜಿ ಹಾಕುವ ಒಂದು ವರ್ಷದ ಮೊದಲೇ ಕ್ರೆಡಿಟ್ ಸ್ಕೋರ್ ಬಗ್ಗೆ ಹೆಚ್ಚಿನ ಗಮನ ಹೊಂದಿರಬೇಕು. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ಯಾವುದೇ ಕಾರಣಕ್ಕೂ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಹಾಗಾಗಿ, ಮೊದಲೇ ಬಾಕಿ ಇರುವ ಸಾಲವನ್ನು ತೀರಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿ, ಗೃಹ ಸಾಲಕ್ಕೆ ಅರ್ಜಿ ಹಾಕುವ ವೇಳೆಗೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವಂತೆ ನೋಡಿಕೊಳ್ಳಬೇಕು. - ಅಧಿಕೃತ ಬಿಲ್ಡರ್ ಇರಲಿ
ಯಾರೋ ಹೇಳಿದರು ಎಂದು, ಆಫರ್ ಕೊಟ್ಟರು ಎಂದು ಸಿಕ್ಕ ಸಿಕ್ಕ ಬಿಲ್ಡರ್ ಗಳಿಂದ ಅಪಾರ್ಟ್ ಮೆಂಟ್ ಖರೀದಿಸಬಾರದು. ಅಧಿಕೃತ ಬಿಲ್ಡರ್ ಅಥವಾ ಪ್ರಾಪರ್ಟಿ ಇರದಿದ್ದರೂ ಬ್ಯಾಂಕುಗಳು ಲೋನ್ ಅರ್ಜಿಯನ್ನು ತಿರಸ್ಕರಿಸುತ್ತವೆ. ಖರೀದಿಗೆ ಮುನ್ನ ಬಿಲ್ಡರ್ ಬಗ್ಗೆ, ಪ್ರಾಪರ್ಟಿ ಬಗ್ಗೆ ಪರಿಶೀಲನೆ ಮಾಡುವುದು ಅಗತ್ಯ. - ಉದ್ಯೋಗ ಸ್ಥಿರತೆ
ನೀವು ಕೆಲಸ ಮಾಡುವ ಕಂಪನಿಗಳ ಸ್ಥಿತಿಗತಿ, ಹಿನ್ನೆಲೆ ಕೂಡ ಗೃಹ ಸಾಲವನ್ನು ನಿರ್ಧರಿಸುತ್ತದೆ. ಸಣ್ಣಪುಟ್ಟ ಕಂಪನಿಗಳಲ್ಲಿಕೆಲಸ ಮಾಡುತ್ತಿದ್ದರೆ, ಅಸಂಘಟಿತ ವಲಯದ ಕೆಲಸಗಾರರಾಗಿದ್ದರೆ, ಪದೇಪದೆ ಕಂಪನಿ ಬದಲಾಯಿಸಿದ್ದರೂ ಗೃಹಸಾಲದ ಅರ್ಜಿಯನ್ನು ಬ್ಯಾಂಕುಗಳು ತಿರಸ್ಕರಿಸುತ್ತವೆ. - ಅಸಮರ್ಪಕ ದಾಖಲೆ ಒದಗಿಸುವುದು
ಗೃಹ ಸಾಲಕ್ಕೆ ಸರ್ಜಿ ಸಲ್ಲಿಸುವಾಗ ಆಸ್ತಿ, ವೈಯಕ್ತಿಕ ದಾಖಲೆಗಳು ಸೇರಿ ಎಲ್ಲಮಾಹಿತಿಯನ್ನು, ದಾಖಲೆಗಳನ್ನು ನಿಖರವಾಗಿ ನೀಡಬೇಕು. ಅರ್ಜಿಯಲ್ಲಿಕೆಲವೊಂದು ತಪ್ಪುಗಳು ಇದ್ದರೂ ತಿರಸ್ಕರಿಸಲಾಗುತ್ತದೆ. ಇನ್ನು, ನೀವು ಖರೀದಿಸುವ ಆಸ್ತಿಯ ಮೌಲ್ಯದಲ್ಲಿವ್ಯತ್ಯಾಸ ಇದ್ದರೂ ಅರ್ಜಿ ತಿರಸ್ಕಾರಗೊಳ್ಳುವ ಸಾಧ್ಯತೆಗಳು ಇರುತ್ತವೆ.