ಹಾಲಿವುಡ್ ನ ಖ್ಯಾತ ನಟ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
‘ಕಿಲ್ ಬಿಲ್’, ‘ರಿಸವರ್ಯರ್ ಡಾಗ್ಸ್’, ‘ಡೈ ಅನದರ್ ಡೇ’, ‘ಸ್ಕೇರಿ ಮೂವಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೈಕಲ್ ಗೆ 67 ವರ್ಷ ವಯಸ್ಸಾಗಿತ್ತು. ಮೈಕಲ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯಾಡ್ಸನ್ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿ ಇದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
1957ರಲ್ಲಿ ಶಿಕಾಗೊನಲ್ಲಿ ಜನಿಸಿದ ಮೈಕಲ್ ಅವರ ತಾಯಿ ಸಿನಿಮಾಕರ್ಮಿಯಾಗಿದ್ದರು. ಅವರ ತಂದೆ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಮೈಕಲ್ ಅವರ ಸಹೋದರ ವರ್ಜಿನಿಯಾ ಮ್ಯಾಡ್ಸನ್ ಸಹ ಹಾಲಿವುಡ್ ನಟರಾಗಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಿಂದ ಆರಂಭಿಸಿ ಸಿನಿಮಾಗಳಲ್ಲಿ ನಾಯಕನಾಗಿ, ವಿಲನ್ ಆಗಿ ನಟಿಸಿದ್ದಾರೆ. ಮೈಕಲ್ ಅವರ ಮಗ 2022ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಖಿನ್ನತೆಯೇ ಹೃದಯಾಘಾತಕ್ಕೆ ಕಾರಣ ಎನ್ನಲಾಗಿದೆ.