ಹಾಸನ: ಹೊಳೆನರಸೀಪುರಕ್ಕೆ ಈಗ ಸ್ವಾತಂತ್ರ್ಯ ಸಿಕ್ಕಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, 2024ರ ಹೊಳೆನರಸೀಪುರ ಕ್ಷೇತ್ರದ ದಿಕ್ಕು, ದಿಸೆ ಬದಲಾಲಿಗೆದ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ಎಲ್ಲ ಯಸಸ್ಸು ಅವರಿಗೆ ಸಲ್ಲುತ್ತದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಇಡೀ ಹೊಳೆನರಸೀಪುರಕ್ಕೆ ಲೈಟ್ ಇರುವುದನ್ನು ನೋಡಿರಲಿಲ್ಲ. ಕೇವಲ ಒಂದೇ ಮನೆಗೆ ಇರುತ್ತಿತ್ತು. ಶ್ರೇಯಸ್ ಪಟೇಲ್ ಅವರು ಮತ್ತೆ ತಮ್ಮ ತಾತನ ಕಾಲಕ್ಕೆ ನಿಮ್ಮನ್ನೆಲ್ಲ ಕರೆದೊಯ್ದಿದ್ದಾರೆ. ಅವರು ಈ ಕ್ಷೇತ್ರವನ್ನು ಮಾದರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.