ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಎಚ್ಎಂಪಿ ವೈರಸ್ ಬೆಂಗಳೂರಿಗೂ ಎಂಟ್ರಿ ಕೊಟ್ಟಿದ್ದು, 8 ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡಿತ್ತು. ಇದು ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಮಗುವಿನ ಆರೋಗ್ಯದ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ವೈರಸ್ ಗೆ ಗುರಿಯಾಗಿದ್ದ ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಗು ಲವಲವಿಕೆಯಿಂದ ಇದೆ. ಜ್ವರ ಮತ್ತು ಕಫ ಕಡಿಮೆಯಾಗಿದೆ. ಆದರೆ, ಮೈ ಕೈ ನೋವು, ಸ್ವಲ್ಪ ಸುಸ್ತು ಇದೆ. ಸದ್ಯ ಮಗು ಆಹಾರ ಸೇವಿಸುತ್ತ ಗುಣಮುಖವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಜನರಲ್ ವಾರ್ಡ್ ನಲ್ಲಿಯೇ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಆರೋಗ್ಯ ಇಲಾಖೆ ಸೂಚನೆ ನೀಡಿದರೆ, ಇಂದು ಮಗು ಡಿಸ್ಚಾರ್ಜ್ ಆಗಬಹುದು ಎನ್ನಲಾಗುತ್ತಿದೆ.